ಶ್ರೀನಗರ: ಪುಲ್ವಾಮಾದಲ್ಲಿ ಕಾರಿನ ಮೂಲಕ ಸ್ಪೋಟ ನಡೆಸಿ, 42 ಸಿಆರ್’ಪಿಎಫ್ ಯೋಧರ ಸಾವಿಗೆ ಕಾರಣವಾದ ಉಗ್ರರು ಈಗ ಮತ್ತೆ ಅಂತಹುದ್ದೇ ಇನ್ನೊಂದು ದಾಳಿಗೆ ಸಿದ್ದರಾಗಿದ್ದು, ಈ ಬಾರಿ ಬೈಕ್ ಬಳಸಿ ಸ್ಪೋಟ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಗುಪ್ತಚರ ಇಲಾಖೆ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಿಮೋಟ್ ಕಂಟ್ರೋಲ್ ಮೋಟಾರ್ ಬೈಕ್ ಬಳಸಿ ಭಾರೀ ದಾಳಿಗಳನ್ನು ನಡೆಸಲು ಸಿದ್ದತೆ ನಡೆಸಿದೆ ಎಂದಿದೆ.
ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರಮುಖವಾಗಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 9 ಗಂಟೆ ನಂತರವೇ ಭದ್ರತಾ ಪಡೆಗಳ ಕಾನ್ವೆ ಸಂಚರಿಸಬೇಕು ಎಂದು ಆದೇಶಿಸಲಾಗಿದೆ.
Discussion about this post