ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ನೈಟ್ ಲ್ಯಾಂಡಿಂಗ್ #NightLanding ಕಾಮಗಾರಿ ಜೂನ್ ತಿಂಗಳ ಮೊದಲನೇ ವಾರದಲ್ಲಿ ಸಂಪೂರ್ಣ ಮುಕ್ತಾಯಗೊಳ್ಳಲಿದೆ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ ಅಧ್ಯಕ್ಷ ನಂಜಯ್ಯ ಮಠ ಹೇಳಿದ್ದಾರೆ.
#Airport ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ನೈಟ್ ಲ್ಯಾಂಡಿಂಗ್ ಕಾಮಗಾರಿಯನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು.
Also Read>> Landmark Heart Surgery in Davanagere | SS Narayana hospital completes first modified Bentall procedure
ನೈಟ್ ಲ್ಯಾಂಡಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನಂಜಯ್ಯ ಮಠ ಅವರು ಹಲವು ಬಾರಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಅದೇ ರೀತಿಯಲ್ಲಿ ಇಂದೂ ಸಹ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಈ ವೇಳೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಕರೆಸಿ ಮಾತನಾಡಿದ ಅವರು, ನಾನು ಈ ತಿಂಗಳ 7-8ನೇ ತಾರೀಕಿನಂದು ಮತ್ತೊಮ್ಮೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ನೈಟ್ ಲ್ಯಾಂಡಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಅಧಿಕಾರಿಗಳು ಜೂನ್ ತಿಂಗಳ ಮೊದಲ ವಾರದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಇನ್ನು, ಇಂಡಿಗೋ ವಿಮಾನ ಹಾರಾಟದ ಕುರಿತಂತೆ ಮಾತನಾಡಿದ ನಂಜಯ್ಯ ಮಠ ಅವರು, ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣವನ್ನು ನಿಲ್ಲಿಸಿರುವುದು, ಈ ನೈಟ್ ಲ್ಯಾಂಡಿಂಗ್ ವಿಚಾರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ಸಂಪೂರ್ಣ ರಾಜ್ಯ ಸರ್ಕಾರವೇ ಹಣವನ್ನು ನೀಡಿದ್ದು, ಇಂಡಿಗೋ ವಿಮಾನವು ಕೇಂದ್ರ ಸರ್ಕಾರದ ಅಸ್ತಿತ್ವದಲ್ಲಿರುವುದರಿಂದ ಪೈಲೆಟ್’ಗಳ ಕೊರತೆಯಿಂದ ಚಾಲನೆಯನ್ನು ನಿಲ್ಲಿಸಿರುತ್ತದೆ ಎಂದರು.
ಶಿವಮೊಗ್ಗ ನಗರದಲ್ಲಿ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಎಚ್.ಸಿ. ಯೋಗೇಶ್ ಅವರು ಹಲವು ಬಾರಿ ಮನವಿಯನ್ನು ನೀಡಿದ್ದರು. ಇದರ ಸಂಬಂಧ ನೈಟ್ ಲ್ಯಾಂಡಿಂಗ್ ಚಾಲನೆಗೆ ಇಂಡಿಗೋ ವಿಮಾನ ಸಂಸ್ಥೆ ಹಾಗೂ ಇನ್ನುಳಿದ ಅನೇಕ ವಿಮಾನ ಸಂಸ್ಥೆಗಳೊಂದಿಗೆ ಚರ್ಚಿಸಿ ಶಿವಮೊಗ್ಗ ನಗರಕ್ಕೆ ವಿಮಾನದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವುದಾಗಿ ನಂಜಯ್ಯ ಮಠ ಅವರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















