ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕರ್ನಾಟಕ ಸ್ಟೇಟ್ ಸೇಫ್ಟಿ ಇನ್ಸ್ಟಿಟ್ಯೂಟ್ #KarnatakaStateSafetyInstitute ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಸೆಮಿನಾರ್ ಯಶಸ್ವಿಯಾಗಿ ಸಂಪನ್ನಗೊಂಡಿತು.
ಜೆಎಸ್’ಡಬ್ಲ್ಯೂ ಎಕ್ಸ್ಪೀರಿಯೆನ್ಸ್ ಸೆಂಟರ್’ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಬಳ್ಳಾರಿ #Bellary ಕೊಪ್ಪಳ ವಲಯ ಸುರಕ್ಷಾ ಸಮಿತಿಯ ಎಲ್ಲಾ ಕಾರ್ಖಾನೆಗಳ ಸುಮಾರು 200 ಉದ್ಯೋಗಿಗಳು ಭಾಗವಹಿಸಿದ್ದರು.
ಜೆಎಸ್’ಡಬ್ಲ್ಯೂ ಸಂಸ್ಥೆಯ ವಿಜಯ ನಗರ ಮತ್ತು ಸೇಲಂ ಪ್ಲಾಂಟ್ ಪ್ರೆಸಿಡೆಂಟ್ ಮುರುಗನ್ ಹಾಗೂ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಅಡಿಷನಲ್ ಡೈರೆಕ್ಟರ್ ಕೆ.ಜಿ. ನಂಜಪ್ಪ ಹಾಗೂ ಹುಬ್ಬಳ್ಳಿ #Hubli ವಿಭಾಗದ ಜಂಟಿ ನಿರ್ದೇಶಕರಾದ ರವೀಂದ್ರನಾಥ ರಾಥೋಡ್, ಜೆಎಸ್’ಡಬ್ಲ್ಯೂ ಸಂಸ್ಥೆಯ ಫ್ಯಾಕ್ಟರಿ ಮ್ಯಾನೇಜರ್ ಮತ್ತು ಸಿಇಓ ಲೋಕೆಂದ್ರ ರಾಜ್ ಸಿಂಗ್ ಅವರುಗಳು ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಆನಂತರ ಗಣ್ಯರು ತಮ್ಮ ವೃತ್ತಿಯ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ಸಹಾಯಕ ನಿರ್ದೇಶಕರಾದ ವರುಣ್ ಜೆಎಸ್’ಡಬ್ಲ್ಯೂ ಸಹಕಾರದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ಪೂರ್ಣಗೊಂಡಿತು. ಸೆಮಿನಾರ್ ಕಾರ್ಯಕ್ರಮದಲ್ಲಿ 5 ಹಂತದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ನುರಿತ ಮತ್ತು ಅನುಭವದಾರರು ತರಬೇತಿ ನೀಡಿದರು.
ಸೆಮಿನಾನರ್ ಯಶಸ್ವಿ ಸಂಘಟನೆಯಲ್ಲಿ ಅಮೂಲ್ಯವಾದ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಕಾರ್ಖಾನೆಗಳು ಮತ್ತು ಬಾಯ್ಲರ್’ಗಳ ಜಂಟಿ ನಿರ್ದೇಶಕರಾದ ರವೀಂದ್ರನಾಥ ರಾಥೋಡ್ ಮತ್ತು ಬಳ್ಳಾರಿ ಹಿರಿಯ ಸಹಾಯಕ ನಿರ್ದೇಶಕರಾದ ವರುಣ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಸೆಮಿನಾರ್’ನಲ್ಲಿ ಕೊಪ್ಪಳ ವಿಭಾಗದ ಕಿರ್ಲೋಸ್ಕರ್, ಎಂಎಸ್’ಪಿಎಲ್ ಕಲ್ಯಾಣಿ, ಮುಕುಂದ ಸುಮಿ, ಎಂಎಸ್ ಮೆಟಲ್ಸ್ ಇತರೆ ಕಾರ್ಖಾನೆಗಳು ಭಾಗವಹಿಸಿದ್ದರು.
ವಿಜಯನಗರ ಜಿಲ್ಲೆಯಲ್ಲಿ ಬಿಎಂ ಇಸ್ಪಾಟ್ ಎಸ್’ಎಲ್’ಆರ್ ಮೆಟಲಿಕ್ಸ್, ಬಳ್ಳಾರಿ ವಿಭಾಗದಲ್ಲಿ ಜಾನಕಿ ಕಾರ್ಪೊರೇಷನ್ಸ್, ಎವನ್ ಸ್ಟೀಲ್, ಜಿಂದಾಲ್ ಮತ್ತು ಜಿಂದಾಲ್ ಸಮೂಹ ಸಂಸ್ಥೆಗಳ ಎಲ್ಲಾ ಕಾರ್ಖಾನೆಯ ಉದ್ಯೋಗಿಗಳು ಭಾಗವಹಿಸಿದ್ದರು.
ವಿಶೇಷವಾಗಿ ಜೆ.ಎಸ್. ಡಬ್ಲೂ ಸಂಸ್ಥೆಯ ಆಶಿಶ್ ಪಾಂಡಾ, ಕಮಲಾಕರ್, ಸಾದಿಕ್ ಪಾಷಾ ಮತ್ತು ಮುಖ್ಯವಾಗಿ ಮುರುಗನ್ ರವರ ಸಹಾಯಕ್ಕೆ ಮತ್ತು ಈ ಮಹತ್ವದ ಕಾರ್ಯಕ್ರಮವನ್ನು ಸಂಘಟಿಸುವ ಪ್ರಯತ್ನಗಳಿಗಾಗಿ ಬಳ್ಳಾರಿ ಕೊಪ್ಪಳ ವಿಜಯನಗರ ಸುರಕ್ಷತಾ ಸಮಿತಿಯ ವತಿಯಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು.
(ವರದಿ: ಮುರುಳೀಧರ್ ಎಂ. ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post