ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಕೋಟ್ಯಾಂತರ ಹಿಂದೂಗಳ #Hindu 500 ವರ್ಷಗಳ ತಾಳ್ಮೆ ಹಾಗೂ ತಪಸ್ಸು, ಲಕ್ಷಾಂತರ ಮಂದಿಯ ತ್ಯಾಗಕ್ಕೆ ಇಂದು ಫಲ ನೀಡುವ ಆ 84 ಸೆಕೆಂಡ್’ಗಳ ಅಮೃತ ಗಳಿಗೆ ಇಂದು ಸಾಕಾರಗೊಳ್ಳಲಿದೆ.
ಹೌದು… ಭಾರತ #Bharat ಮಾತ್ರವಲ್ಲ ಇಡಿಯ ವಿಶ್ವವೇ ಬೆರಗಾಗಿ ನೋಡುತ್ತಿರುವ ದಿನ ಇದು. ಅಯೋಧ್ಯೆಯಲ್ಲಿ #Ayodhya ಪ್ರಭು ಶ್ರೀಬಾಲರಾಮನ ಪ್ರಾಣಪ್ರತಿಷ್ಠೆ ಇಂದು ನಡೆಯಲಿದ್ದು, ಭಾರತದ ಮಟ್ಟಿಗೆ ಐತಿಹಾಸಿಕ ಇಂದಾಗಿದೆ.
ಯಾವ ಮುಹೂರ್ತ? ಲಗ್ನ?
ಶ್ರೀ ಶೋಭಕೃತ್ ನಾಮ ಸಂವತ್ಸರ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ ದ್ವಾದಶಿ, ಉತ್ತರಾಯಣ, ಮೃಗಶಿರಾ ನಕ್ಷತ್ರ, ಅಭಿಜಿತ್ ಲಗ್ನದ ಸಮಯವಾದ ಇಂದು ಮಧ್ಯಾಹ್ನ 12.30ರ ವೇಳೆಗೆ ಬಾಲರಾಮನ #RamLalla ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.
ಈ ಐತಿಹಾಸಿಕ ಕಾರ್ಯಕ್ರಮದ ಮುಖ್ಯ ಯಜಮಾನತ್ವವನ್ನು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು ವಹಿಸಲಿದ್ದು, ಒಟ್ಟು 14 ದಂಪತಿಗಳು ಪ್ರಧಾನಿಯವರೊಂದಿಗೆ ಸಹ-ಯಜಮಾನತ್ವ ವಹಿಸಿ ಧಾರ್ಮಿಕ ವಿಧಿವಿವಿಧಾನ ನೆರವೇರಿಸಲಿದ್ದಾರೆ.
ಯಾರ ನೇತೃತ್ವ?
ಕಾಶಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹಾಗೂ ಲಕ್ಷ್ಮೀಕಾಂತ ಶಾಸ್ತ್ರಿಗಳು ಪ್ರಾಣಪ್ರತಿಷ್ಠಾಪನೆಯ ನೇತೃತ್ವ ವಹಿಸಲಿದ್ದಾರೆ. ಮುಖ್ಯವಿಧಿವಿಧಾನ ಮಧ್ಯಾಹ್ನ 12.20ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
84 ಸೆಕೆಂಡಿನ ಮುಹೂರ್ತ
ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಮುಖ್ಯ ಮೂಲ ಮುಹೂರ್ತ ಕೇವಲ 84 ಸೆಕೆಂಡ್’ಗಳದ್ದಾಗಿದೆ. ಪ್ರಾಣಪ್ರತಿಷ್ಠಾಪನೆಯ ವಿವಿಧ ವಿಧಿಗಳು ಮಧ್ಯಾಹ್ನ 12.20ರಿಂದ ಆರಂಭವಾಗಲಿವೆ. ಆದರೆ ಮೂಲ ಮುಹೂರ್ತ ಮಧ್ಯಾಹ್ನ 12.30ರ ಸುಮಾರಿಗೆ ಕೇವಲ 84 ಸೆಕೆಂಡಿನದ್ದಾಗಿದೆ. 84 ಕ್ಷಣಗಳಲ್ಲಿ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಇತರ ವಿಧಿ ವಿಧಾನಗಳನ್ನು 12.55ರೊಳಗೆ ಮುಗಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post