ಕಲ್ಪ ಮೀಡಿಯಾ ಹೌಸ್ | ನಾಗಾಂವ್(ಅಸ್ಸಾಂ) |
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ #RahulGandhi ನಡೆಸುತ್ತಿರುವ ನ್ಯಾಯಯಾತ್ರೆಯ ಬಸ್ ಮುಂಭಾಗದಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಜೈಶ್ರೀರಾಮ್, ಮೋದಿ… ಮೋದಿ… ಮೋದಿ… #Modi ಘೋಷಣೆ ಕೂಗಿರುವ ಘಟನೆ ನಡೆದಿದೆ.
ಅಸ್ಸಾಂನ #Assam ನಾಗಾಂವ್’ನಲ್ಲಿ ನ್ಯಾಯಯಾತ್ರೆಯ ಬಸ್’ನಲ್ಲಿ ರಾಹುಲ್ ಗಾಂಧಿ ತೆರಳುತ್ತಿದ್ದ ವೇಳೆ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಜೈಶ್ರೀರಾಮ್ ಹಾಗೂ ಮೋದಿ…ಮೋದಿ…ಮೋದಿ… ಘೋಷಣೆ ಕೂಗಿದ್ದಾರೆ. ಹೀಗೆ ಘೋಷಣೆ ಕೂಗಿದವರ ಕಡೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ #FlyingKiss ನೀಡಿದ್ದಾರೆ.
ಈ ಕುರಿತಂತೆ ಎಕ್ಸ್’ನಲ್ಲಿ ವೀಡಿಯೋ ಶೇರ್ ಮಾಡಿರುವ ರಾಹುಲ್ ಗಾಂಧಿ, ನಮ್ಮ `ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಎಲ್ಲರಿಗೂ ತೆರೆದಿರುತ್ತದೆ. `ಜುಡೇಗಾ ಭಾರತ್, ಜೀತೇಗಾ ಹಿಂದೂಸ್ತಾನ್’ ಎಂದಿದ್ದಾರೆ.
ರಾಹುಲ್ ಗಾಂಧಿ ಬಸ್’ನಲ್ಲಿ ತೆರಳುತ್ತಿದ್ದ ವೇಳೆ ಘೋಷಣೆ ಕೂಗಲಾಗಿದೆ. ಈ ವೇಳೆ ಘೋಷಣೆ ಕೂಗಿದವರ ಕಡೆ ಬಸ್’ನಿಂದಲೇ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಆನಂತರ ಕೊಂಚ ತಾಳ್ಮೆ ಕಳೆದುಕೊಂಡ ಅವರು ಬಸ್’ನಿಂದ ಇಳಿದು ಬಿಜೆಪಿ-ಹಿಂದೂ ಕಾರ್ಯಕರ್ತರ ಕಡೆಗೆ ತೆರಳಿ ಮಾತನಾಡಿದ್ದಾರೆ.
ಘಟನೆ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದರು ಘಟನೆಯನ್ನು ವಿವರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ #PMNarendraModi ಅಥವಾ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಕಾಂಗ್ರೆಸ್ ಹೆದರುವುದಿಲ್ಲ. #Manipur ಮಣಿಪುರ-ಮಹಾರಾಷ್ಟ್ರ #Maharastra ನ್ಯಾಯ ಯಾತ್ರೆಯ ಅಸ್ಸಾಂ ಲೆಗ್’ನಲ್ಲಿ ಗಾಂಧಿ ಮತ್ತು ಜೈರಾಮ್ ರಮೇಶ್ ಸೇರಿದಂತೆ ತನ್ನ ನಾಯಕರನ್ನು ಬಿಜೆಪಿ ಬೆಂಬಲಿಗರು ಗುರಿಯಾಗಿಸಿದ್ದಾರೆ ಎಂದು ಹೇಳಿಕೊಂಡಿದೆ.
ಆದರೆ, ಗಾಂಧಿ ಅವರ ಸಮ್ಮುಖದಲ್ಲಿ ಜೈ ಶ್ರೀ ರಾಮ್ ಮತ್ತು ಮೋದಿ, ಮೋದಿ ಘೋಷಣೆಗಳನ್ನು ಕೂಗಿದ ನಂತರ ಅವರು ಗದ್ದಲ ಎಬ್ಬಿಸಿದರು ಎಂದು ಬಿಜೆಪಿ ಹೇಳಿಕೊಂಡಿದೆ.
ಇದೇ ರೀತಿ ಅವರು ಗಲಿಬಿಲಿಗೊಂಡರೆ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಭಾಗವಾಗಲು ಹಿಂದೂ ವಿರೋಧಿ ಕಾಂಗ್ರೆಸ್ ಆಹ್ವಾನವನ್ನು ತಿರಸ್ಕರಿಸಿದ ನಂತರ, ಮುಂದಿನ ದಿನಗಳಲ್ಲಿ ಅವರು ಈ ದೇಶದ ಜನರನ್ನು ಹೇಗೆ ಎದುರಿಸುತ್ತಾರೆ? ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ವಿಡಿಯೋವನ್ನು ಎಕ್ಸ್ ಟ್ಯಾಗ್ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post