ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಕೊರೋನಾ #Corona ಹಾಗೂ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ತಮಿಳಿನ ಖ್ಯಾತ ನಟ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಸಂಸ್ಥಾಪಕ ವಿಜಯಕಾಂತ್ (71) #ActorVijaykanath ಗುರುವಾರ ಬೆಳಗಿನ ಜಾವ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೋವಿಡ್ #Covid ಸೋಂಕು ಹಾಗೂ ನ್ಯುಮೋನಿಯಾ ಜ್ವರದಿಂದ ಚೆನ್ನೈನ #Chennai ಎಂಐಒಟಿ ಇಂಟರ್’ನ್ಯಾಷನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀವ್ರ ಕ್ಷೀಣಿಸಿದ್ದರಿಂದ ನಿನ್ನೆ ರಾತ್ರಿಯಿಂದ ಅವರು ವೆಂಟಿಲೇಟರ್ ಬೆಂಬಲದಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
ವಿಜಯ್ ಕಾಂತ್ ಅವರು ಡಿಎಂಡಿಕೆ #DMDK ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಮತ್ತು ಅವರ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ನಾರಾಯಣನ್ ವಿಜಯರಾಜ್ ಅಲಗರಸ್ವಾಮಿ ವಿಜಯಕಾಂತ್ ಎಂಬ ರಂಗನಾಮದಿಂದ ಚಿರಪರಿಚಿತರಾಗಿದ್ದರು. ಅವರು ತಮಿಳು ಚಿತ್ರರಂಗದಲ್ಲಿ ಖ್ಯಾತ ನಟರಾಗಿದ್ದು, ರಾಜಕಾರಣಿಯೂ ಹೌದು.
2005ರ ಸೆ.14 ರಂದು, ವಿಜಯಕಾಂತ್ ಅವರು ತಮ್ಮ ದೇಸಿಯ ಮುರ್ಪೊಕ್ಕು ದ್ರಾವಿರ್ಡ ಕಳಗಂ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು. 2006 ರ ವಿಧಾನಸಭಾ ಚುನಾವಣೆಯಲ್ಲಿ, ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಎಲ್ಲಾ 234 ಸ್ಥಾನಗಳಲ್ಲಿ ಸ್ಪರ್ಧಿಸಿ ಶೇ. 8.38 ಮತಗಳೊಂದಿಗೆ ಕೇವಲ ಒಂದು ಸ್ಥಾನವನ್ನು ಗಳಿಸಿತು. ವಿರುಧಾಚಲಂ ಕ್ಷೇತ್ರದಿಂದ ವಿಜಯಕಾಂತ್ ಮಾತ್ರ ಗೆದ್ದು, ಉಳಿದೆಲ್ಲಾ ಅಭ್ಯರ್ಥಿಗಳು ಸೋತಿದ್ದರು.
2011ರ ಅಸೆಂಬ್ಲಿ ಚುನಾವಣೆಯಲ್ಲಿ ಡಿಎಂಡಿಕೆ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜೊತೆ ಕೈಜೋಡಿಸಿ 29 ಸ್ಥಾನಗಳನ್ನು ಗೆದ್ದಿದ್ದರು.
ಕಳೆದ ಡಿ.18 ರಂದು ಡಿಎಂಡಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು ಕೊನಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರ ಆರೋಗ್ಯ ವೈಫಲ್ಯದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅವರ ಪತ್ನಿ ಪ್ರೇಮಲತಾ ಅವರಿಗೆ ಪಕ್ಷದ ಲಾಠಿ ಹಸ್ತಾಂತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post