ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸಂಜನಾಗೆ ಬೆಳ್ಳಂಬೆಳಗ್ಗೆ ಸಿಸಿಬಿ ಬಿಗ್ ಶಾಕ್ ನೀಡಿದ್ದು, ಅಧಿಕಾರಿಗಳು ಅವರನ್ನು ಇಂದು ವಶಕ್ಕೆ ಪಡೆಯಲಾಗಿದೆ.
ಇಂದಿರಾನಗರದಲ್ಲಿರುವ ಸಂಜನಾ ಅವರ ನಿವಾಸದ ಮೇಲೆ 6.30ರ ವೇಳೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ಅಧಿಕಾರಿಗಳು ಇವರ ನಿವಾಸವನ್ನು ಸರ್ಚ್ ಮಾಡಲು ನಿನ್ನೆಯೇ ವಾರೆಂಟ್ ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಇಂದು ಮುಂಜಾನೆ ದಾಳಿ ನಡೆಸಿ, ಪರಿಶೋಧನೆ ನಡೆಸಿದ್ದಾರೆ.
ಸುಮಾರು 1.30 ಗಂಟೆಗಳ ಕಾಲ ಪೊಲೀಸರು ಪರಿಶೋಧನೆ ನಡೆಸಿದ ನಂತರ ಸಂಜನಾರನ್ನು ವಶಕ್ಕೆ ಪಡೆದಿದ್ದು, ಸಿಸಿಬಿ ಕಚೇರಿಗೆ ಕರೆದೊಯ್ಯಲಿದ್ದಾರೆ.
ಸಂಜನಾ ಅವರ ನಿವಾಸದಲ್ಲಿ ಅವರ ಮೊಬೈಲ್, ಲ್ಯಾಪ್’ಟಾಪ್, ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳು ನಿವಾಸದಲ್ಲಿ ಪರಿಶೋಧನೆ ನಡೆಸಿದ ವೇಳೆ ಕೋಪಗೊಂಡ ಸಂಜನಾ, ನನ್ನ ವಿರುದ್ಧ ಏನು ಸಾಕ್ಷಿ ಇದೆ ಎಂದು ಹರಿಹಾಯ್ದು, ಕಿರುಚಾಡುತ್ತಾ ಮನೆಯಲ್ಲಾ ಓಡಾಡಿದ್ದಾರೆ. ಇದಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡದ ಅಧಿಕಾರಿಗಳು ಕಚೇರಿಗೆ ಬಂದು, ಉನ್ನತ ಅಧಿಕಾರಿಗಳು ಮಾತನಾಡುತ್ತಾರೆ ಎಂದಷ್ಟೇ ಹೇಳಿದ್ದಾರೆ.
Get In Touch With Us info@kalpa.news Whatsapp: 9481252093

















