ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ – ಮೀರಜ್ ಎಕ್ಸ್’ಪ್ರೆಸ್ ರೈಲು ಮಾರ್ಗದಲ್ಲಿನ ನಾಗಲಾವಿ ಹಾಲ್ಟ್ ನಿಲ್ದಾಣದಲ್ಲಿ ರೈಲುಗಳ ಪರಿಷ್ಕೃತ ಆಗಮನ ಮತ್ತು ನಿರ್ಗಮನ ಸಮಯಗಳಲ್ಲಿ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರಗಳಿ ಇಂತಿವೆ.
- 17332 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ-ಮಿರಜ್ ಎಕ್ಸ್’ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಿಗ್ಗೆ 11:37ಕ್ಕೆ ಆಗಮಿಸಿ, 11:39ಕ್ಕೆ ಹೊರಡಲಿದೆ.
- 17325 ಸಂಖ್ಯೆಯ ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್’ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 8:03ಕ್ಕೆ ಬಂದು 08:05ಕ್ಕೆ ಹೊರಡಲಿದೆ.
- 17326 ಸಂಖ್ಯೆಯ ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್’ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 6:53ಕ್ಕೆ ಆಗಮಿಸಿ, 06:55ಕ್ಕೆ ಹೊರಡಲಿದೆ.
- 17331 ಸಂಖ್ಯೆಯ ಮೀರಜ್-ಎಸ್’ಎಸ್’ಎಸ್ ಹುಬ್ಬಳ್ಳಿ ಎಕ್ಸ್’ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಮಧ್ಯಾಹ್ನ 12:27ಕ್ಕೆ ಆಗಮಿಸಿ, 12:29ಕ್ಕೆ ಹೊರಡಲಿದೆ.
ಪ್ರಾಯೋಗಿಕ ನಿಲುಗಡೆ ಸ್ಥಗಿತ
ಕಮಲನಗರದಲ್ಲಿ ಬೆಂಗಳೂರು-ನಾಂದೇಡ್ ಎಕ್ಸ್’ಪ್ರೆಸ್’ನ ಪ್ರಾಯೋಗಿಕ ನಿಲುಗಡೆ ಸ್ಥಗಿತಗೊಳಿಲಾಗಿದೆ.
ಕಮಲನಗರ ನಿಲ್ದಾಣದಲ್ಲಿ ರೈಲು ಸಂಖ್ಯೆ 16593/16594 ಕೆಎಸ್’ಆರ್ ಬೆಂಗಳೂರು-ನಾAದೇಡ್-ಕೆಎಸ್’ಆರ್ ಬೆಂಗಳೂರು ದೈನಂದಿನ ಎಕ್ಸ್’ಪ್ರೆಸ್ ರೈಲಿಗೆ ಒದಗಿಸಲಾದ ತಾತ್ಕಾಲಿಕ ಪ್ರಾಯೋಗಿಕ ನಿಲುಗಡೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post