ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆ ವಿವಿಧ ನಿಲ್ದಾಣಗಳಲ್ಲಿ ಈ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ಇದರಂತೆ ಈ ಹಿಂದೆ 2025 ರ ಡಿಸೆಂಬರ್ 31/ ಜನವರಿ 2026 ರ ಆರಂಭದಲ್ಲಿ ತಿಳಿಸಲಾಗಿದ್ದ ಈ ತಾತ್ಕಾಲಿಕ ನಿಲುಗಡೆಗಳನ್ನು ಈಗ ಮಾರ್ಚ್ 31, 2026 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಯಾವ ರೈಲುಗಳ, ಎಲ್ಲಲ್ಲಿ ನಿಲುಗಡೆ?
- 16595/16596 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಕಾರವಾರ-ಕೆಎಸ್’ಆರ್ ಬೆಂಗಳೂರು ಪಂಚ ಗಂಗಾ ಡೈಲಿ ಎಕ್ಸ್’ಪ್ರೆಸ್ ಕುಣಿಗಲ್’ನಲ್ಲಿ
- 16239/16240 ಸಂಖ್ಯೆಯ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್’ಪ್ರೆಸ್ ಸಂಪಿಗೆ ರಸ್ತೆಯಲ್ಲಿ
- 16228 ಸಂಖ್ಯೆಯ ತಾಳಗುಪ್ಪ-ಮೈಸೂರು ಡೈಲಿ ಎಕ್ಸ್’ಪ್ರೆಸ್ ಮಲ್ಲೇಶ್ವರದಲ್ಲಿ

- 16315/16316 ಸಂಖ್ಯೆಯ ಮೈಸೂರು-ತಿರುವನಂತಪುರ ಉತ್ತರ-ಮೈಸೂರು ಡೈಲಿ ಎಕ್ಸ್’ಪ್ರೆಸ್ ಮದ್ದೂರಿನಲ್ಲಿ
- 66553 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಅಶೋಕಪುರಂ ಕೃಷ್ಣದೇವರಾಯನಲ್ಲಿ ಮೆಮು ಸೇವೆ
- 16521 ಸಂಖ್ಯೆಯ ಬಂಗಾರಪೇಟೆ-ಕೆಎಸ್’ಆರ್ ಬೆಂಗಳೂರು ಮೆಮು ಸೇವೆಗಳು ಮತ್ತು ರೈಲು ಸಂಖ್ಯೆ 66519/66520 ಮಾರಿಕುಪ್ಪಂ-ಕೆಎಸ್’ಆರ್ ಬೆಂಗಳೂರು-ಮಾರಿಕುಪ್ಪಂ ದೇವನಗೊಂದಿಯಲ್ಲಿ ಮೆಮು ಸೇವೆಗಳು
- 17325/17326 ಸಂಖ್ಯೆಯ ಬೆಳಗಾವಿ-ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಕೆಎಸ್’ಆರ್ ರಾಮಗಿರಿಯಲ್ಲಿ

- 17391/17392 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಸಿಂಧನೂರು-ಕೆಎಸ್’ಆರ್ ಬೆಂಗಳೂರು ಡೈಲಿ ಎಕ್ಸ್’ಪ್ರೆಸ್ ರಾಮಗಿರಿ ಮತ್ತು ಚಲಗೇರಿಯಲ್ಲಿ
- 16587/16588 ಸಂಖ್ಯೆಯ ಯಶವಂತಪುರ-ಬಿಕಾನೇರ್ -ಯಶವಂತಪುರ ಬೈ-ವೀಕ್ಲಿ ಎಕ್ಸ್’ಪ್ರೆಸ್ ಬೀರೂರಿನಲ್ಲಿ
- 16239/16240 ಸಂಖ್ಯೆಯ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್’ಪ್ರೆಸ್ ಅರಳಗುಪ್ಪೆಯಲ್ಲಿ
- 20651/20652 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ತಾಳಗುಪ್ಪ-ಕೆಎಸ್’ಆರ್ ಬೆಂಗಳೂರು ಡೈಲಿ ಎಕ್ಸ್’ಪ್ರೆಸ್ ಅರಸಾಳು ಮತ್ತು ಕುಂಸಿಯಲ್ಲಿ
- 56519/56520 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಹೊಸಪೇಟೆ-ಕೆಎಸ್’ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲುಗಳು ಹೊಳಲ್ಕೆರೆ ಮತ್ತು ಅಮೃತಪುರದಲ್ಲಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















