ಕಲ್ಪ ಮೀಡಿಯಾ ಹೌಸ್ | ಬಿಹಾರ |
ತನ್ನ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ 12 ವರ್ಷದ ಬಾಲಕನನ್ನು ರೈಲ್ವೆ ಹಳಿಗೆ ಕಟ್ಟಿ, #Raiway track ಅಮಾನವೀಯವಾಗಿ ಥಳಿಸಿರುವ ಘಟನೆ ಪಾಟ್ನಾದಿಂದ ಸುಮಾರು 125 ಕಿಮೀ ದೂರದಲ್ಲಿರುವ ಲೆನಿನ್’ಗಾಡ್ ಎಂಬಲ್ಲಿ ನಡೆದಿದೆ.
ಅಂಗಡಿಯಲ್ಲಿ ಕೆಲವು ವಸ್ತುಗಳನ್ನು ಬಾಲಕ ಕದ್ದಿದ್ದಾನೆ ಎಂದು ರೈಲ್ವೇ ಹಳಿಗೆ ಕಟ್ಟಿಹಾಕಿ ಕೋಲಿನಿಂದ ಅಮಾನವೀಯವಾಗಿ ವ್ಯಕ್ತಿ ಥಳಿಸಿದ್ದಾನೆ.
ಅಂಗಡಿಯೊಂದರಿಂದ ಕೆಲ ವಸ್ತುಗಳನ್ನು ಕದ್ದಿದ್ದಾನೆ ಎಂದು ಶಂಕಿಸಿ ಜನರ ಗುಂಪೊಂದು ಬಾಲಕನಿಗೆ ಥಳಿಸಿದ್ದಾನೆ. ನಂತರ ಅವರನ್ನು ಲಖ್ಮಿನಿಯಾ ರೈಲು ನಿಲ್ದಾಣದ ಬಳಿಯ ರೈಲ್ವೇ ಟ್ರಾಕ್’ಗೆ ಕರೆದೊಯ್ದು ಕಟ್ಟಿ ಹಾಕಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಬಾಲಕನನ್ನು ರಕ್ಷಿಸಿ, ವ್ಯಕ್ತಿಗೆ ಥಳಿಸಿದ್ದಾರೆ.
Also read: ಪ್ರಾಣಿಶಾಸ್ತ್ರಜ್ಞ ಆಡಂಗೆ 249 ವರ್ಷ ಜೈಲು ಶಿಕ್ಷೆ | ಇಷ್ಟಕ್ಕೂ ಈತ ಮಾಡಿದ್ದು ಎಂತಹ ಹೀನ, ಅಸಹ್ಯ ಕೃತ್ಯ ನೋಡಿ
ಈ ವೇಳೆ ಮಾತನಾಡಿದ ಸ್ಥಳೀಯರು ಇದು ಸುಳ್ಳು ಆರೋಪ. ಅನ್ಯಾಯವಾಗಿ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಹಲ್ಲೆ ಮಾಡಿದ ವ್ಯಕ್ತಿಗೆ ಕೆಲವರು ಸಹಕಾರ ಸಹ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರನ್ನೆಲ್ಲಾ ಆರೋಪಿಗಳಾದ ರೋಷನ್ ಕುಮಾರ್, ಜೈ ಜೈ ರಾಮ್ ಚೌಧರಿ, ಕಾಹುಲ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post