ಕಲ್ಪ ಮೀಡಿಯಾ ಹೌಸ್ | ಬಿಹಾರ |
ಇಲ್ಲಿನ ವಿಧಾನಸಭಾ ಚುನಾವಣೆಗೆ #AssemblyElection ನಡೆದ ಚುನಾವಣೆಯ ಮತದಾನ ಆರಂಭವಾಗಿ ಒಂದು ಗಂಟೆ ಕಳೆದಿದ್ದು, ಈ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಮೈತ್ರಿ ಕೂಟ ಭಾರೀ ಮುನ್ನಡೆ ಕಾಯ್ದುಕೊಂಡಿದೆ.
9 ಗಂಟೆ ವೇಳೆಗೆ #NDA ಎನ್’ಡಿಎ ಮೈತ್ರಿ ಕೂಟ 130 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ #Mahaghatabandhan ಮೈತ್ರಿಕೂಟ 66, ಜೆಎಸ್’ಪಿ 2 ಹಾಗೂ ಇತರರು 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಇದರಲ್ಲಿ ಕಾಂಗ್ರೆಸ್ #Congress ಪಕ್ಷ ಕೇವಲ 9 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಬಿಹಾರ ಚುನಾವಣೆಯ ಫಲಿತಾಂಶ ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಠಿಸುತ್ತಿದ್ದು, ಆರಂಭಿಕ ಮುನ್ನಡೆಯ ಟ್ರೆಂಡ್ ಗಮನಿಸಿದರೆ, ಸ್ಪಷ್ಟ ಬಹುಮತ ಪಡೆದು ಎನ್’ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುವುದು ಬಹುತೇಕ ನಿಶ್ಚಿತವಾಗಿದೆ. ಆದರೆ, ಮತ ಎಣಿಕೆ ಮುಂದುವರೆದAತೆ ಯಾವುದೇ ರೀತಿಯಲ್ಲೂ ಸಹ ಇದು ತಿರುವು ಪಡೆದುಕೊಳ್ಳಬಹುದು.
243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಸರ್ಕಾರ ರಚಿಸಲು 122 ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಗೆಲ್ಲುವುದು ಅನಿವಾರ್ಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















