ಕಲ್ಪ ಮೀಡಿಯಾ ಹೌಸ್ | ಬಿಹಾರ |
ಬಿಹಾರದಲ್ಲಿ ಉದ್ಭವಿಸಿದ್ದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಜೊತೆಗೂಡಿ ನೂತನ ಸರ್ಕಾರ ರಚಿಸಲಿರುವ ನಿತೀಶ್ ಕುಮಾರ್ ನಿತೀಶ್ ಕುಮಾರ್ Nitish Kumar ಅವರು ವಿಶ್ವಾಸಮತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿದ್ದಾರೆ.
ಜೆಡಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಸದನದಲ್ಲಿ ಇಂದು ವಿಶ್ವಾಸಮತ ಗೆದ್ದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸಿದ್ದಾರೆ. 129 ಶಾಸಕರು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ.
ಒಟ್ಟು 243 ಸದಸ್ಯಬಲದ ಬಿಹಾರದಲ್ಲಿ ಬಹುಮತಕ್ಕೆ 122 ಸದಸ್ಯರ ಅಗತ್ಯವಿತ್ತು, ಬಿಜೆಪಿ-ಜೆಡಿಯು ಮೈತ್ರಿಕೂಟ 128 ಸದಸ್ಯರನ್ನು ಹೊಂದಿದೆ. ಬಿಜೆಪಿಯ 78 ಶಾಸಕರಿದ್ದು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ 45 ಶಾಸಕರನ್ನು ಹೊಂದಿದೆ. ಜಿತಿನ್ ರಾಮ್ ಮಾಂಜಿ ಹಿಂದೂಸ್ತಾನ್ ಅವಾಮ್ ಮೋರ್ಚಾ 4 ಸ್ಥಾನಗಳನ್ನು ಹೊಂದಿತ್ತು.
Also read: ಪಾಕಿಸ್ತಾನಿ ಜನರೇ ಭಾರತದ ದೊಡ್ಡ ಆಸ್ತಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆ
ಇನ್ನುಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದರು. ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿದ್ದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post