ಕಲ್ಪ ಮೀಡಿಯಾ ಹೌಸ್ | ಬಿಹಾರ |
ಬಿಹಾರದ ಸಸಾರಾಮ್‌ನಲ್ಲಿರುವ ಖಾಸಗಿ ಕ್ಲಿನಿಕ್‌ವೊಂದಕ್ಕೆ ಅನಿರೀಕ್ಷಿತ ರೋಗಿಗಳು ಚಿಕಿತ್ಸೆಗಾಗಿ ಧಾವಿಸಿದ್ದರು. ಯಾರೆಂದು ಯೋಚಿಸುತ್ತಿದ್ದಿರಾ ಹೌದು… ಗಾಯಗೊಂಡ ಹೆಣ್ಣು ಮಂಗವೊಂದು ತನ್ನ ಮರಿಯೊಂದಿಗೆ ಚಿಕಿತ್ಸೆಗಾಗಿ ವೈದರ ಬಳಿಗೆ ಬಂದಿತ್ತು.
सासाराम में जब एक बंदर अपने बच्चे के साथ खुद का इलाज़ करवाने पहुंचा निजी अस्पताल। इलाज़ करने वाले डॉक्टर एस एम अहमद खुद को सौभाग्यशाली समझ रहे है की हनुमान जी खुद चलकर इनके पास पहुंचे pic.twitter.com/0NPrAtV6NU
— rajeshkumarojha (@rajeshrepoter) June 8, 2022
ಎದೆಯ ಮೇಲೆ ಮರಿಯನ್ನು ಹಿಡಿದಿಟ್ಟುಕೊಂಡ ಹೆಣ್ಣು ಮಂಗವು ಶಹಜುಮಾ ಪ್ರದೇಶದಲ್ಲಿರುವ ಡಾ. ಎಸ್.ಎಂ. ಅಹ್ಮದ್ ಕ್ಲಿನಿಕನ್ನು ಪ್ರವೇಶಿಸಿತು. ವೈದ್ಯರು ಮಂಗವನ್ನು ಒಳ ಬರುವಂತೆ ಕರೆಯುತ್ತಿದ್ದಂತೆ ಬೆಂಚ್ ಏರಿದ ಮಂಗ ಅದರ ತಲೆ ಮೇಲೆ ಆಗಿದ್ದ ಗಾಯದ ಗುರುತು ಮತ್ತು ಅದರ ಮರಿಗೆ ಕಾಲಿನಲ್ಲಿ ಆಗಿದ್ದ ಗಾಯವನ್ನು ಸನ್ನೆ ಮಾಡಿ ವೈದ್ಯರಿಗೆ ತೋರಿಸಿತು ಎನ್ನಲಾಗಿದೆ.
ನಂತರ ವೈದ್ಯರು ಟೆಟನಸ್ ಚುಚ್ಚುಮದ್ದನ್ನು ನೀಡಿ ಎರಡೀ ಕೋತಿಗಳ ಗಾಯಕ್ಕೆ ಮುಲಾಮು ಹಚ್ಚಿ ಚಿಕಿತ್ಸೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post