ಕಲ್ಪ ಮೀಡಿಯಾ ಹೌಸ್ | ಬಿಜಾಪುರ |
ಇತ್ತೀಚೆಗೆ ಸುರಿದ ಭಾರೀ ಮಳೆಯ ಅಬ್ಬರಕ್ಕೆ ಜಿಲ್ಲೆಯ ರೈತನೊಬ್ಬನ ಬದುಕು ಮೂರಾಬಟ್ಟೆಯಾಗಿದ್ದು, ಮೂರು ಎಕರೆಯಲ್ಲಿ ಬೆಳೆದಿದ್ದ ಜೋಳ ನೀರು ಪಾಲಾಗಿದೆ.
ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ನಾಳತವಾಡ ಗ್ರಾಮದ ಪರಸಪ್ಪ ತತಬೀರಿ ಅವರು ಮೂರು ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆದದ್ದಿರು. ಆದರೆ, ಕಳೆದ ಗುರುವಾರ ಸುರಿದ ಭಾರೀ ಮಳೆಯ ಪರಿಣಾಮ ಇಡಿಯ ಜಮೀನಿನಲ್ಲಿ ನೀರು ತುಂಬಿಕೊಂಡಿದೆ. ಮೊಣಕಾಲುದ್ದಕ್ಕೂ ಎತ್ತರ ನೀರು ಜಮೀನಿನಲ್ಲಿ ನಿಂತಿದ್ದು, ಬೆಳೆಯೆಲ್ಲಾ ನಾಶವಾಗಿದೆ. ಸಾಲಸೋಲ ಮಾಡಿಕೊಂಡು ಬೆಳೆದಿದ್ದ ಬೆಳೆಯೆಲ್ಲಾ ವರುಣ ಕೊಚ್ಚಿಕೊಂಡು ಹೋಗಿದ್ದು, ಇವರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
Also read: ವಿಜ್ಞಾನ ವಿಚಾರಗೋಷ್ಠಿ: ಭದ್ರಾವತಿ ನ್ಯೂಟೌನ್ ಸರ್ಕಾರಿ ಶಾಲೆ ವಿದ್ಯಾರ್ಥಿನಿ ವಿಭಾಗೀಯ ಮಟ್ಟಕ್ಕೆ ಆಯ್ಕೆ
ನಾಲತವಾಡ ಹಾಗೂ ಬಿಜಾಪುರ ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ, ಇವರ ಕಷ್ಟಕ್ಕೆ ಸ್ಪಂದಿಸಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post