ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರೀತಿ ಅಂದ್ರೆ ಹಲವಾರು ಅರ್ಥಗಳಿವೆ. ಪ್ರೀತಿಯೆಂಬುದು ಕೇವಲ ಇಬ್ಬರು ಪ್ರೇಮಿಗಳ ಮಧ್ಯೆ ಅಷ್ಟೇ ನಡೆಯುವಂತಹದಲ್ಲ. ಅದು ಯಾರ ಮೇಲಾದರೂ ಯಾರಿಗೆ ಬೇಕಾದರೂ ಆಗುವಂತಹದ್ದು. ಹಾಗೇ ನನಗೂ ಕೂಡ ಆ ಪ್ರೀತಿ ಎಂಬ ಎರಡಕ್ಷರದ ಮೇಲೆ ನಂಬಿಕೆ ಬಂದಿದೆ.
ಅದು ಯಾವ ಮಟ್ಟಿಗೆ ಅಂದರೆ ಅವನು ನನ್ನಿಂದ ಒಂದು ಕ್ಷಣ ಮರೆಯಾದರೂ ಕೂಡ ಜೀವ ಅವನನ್ನು ನೋಡಲು ಚಡಪಡಿಸುವಷ್ಟರ ಮಟ್ಟಿಗೆ ನಾನು ಅವನನ್ನು ಪ್ರೀತಿಸಲು ಆರಂಭಿಸಿದ್ದೇನೆ. ಪ್ರೀತಿಯನ್ನು ಪ್ರೀತಿಯಿಂದಲೇ ಪಡೆದುಕೊಳ್ಳಬೇಕು ಎಂದು ತಿಳಿದುಕೊಂಡವಳು ನಾನು.
ಜೀವನದಲ್ಲಿ ದೇವರು ಕೊಟ್ಟಿರುವ ಉಡುಗೊರೆ ನೀನು. ದೇವರು ಕೊಟ್ಟ ಉಡುಗೊರೆ ಎಂದ ಮೇಲೆ ಅದು ಎಷ್ಟು ಬೆಳೆ ಬಾಳುವಂತದ್ದು ಎಂದು ಹೇಳಲು ಸಾಧ್ಯವಿಲ್ಲ. ಅಷ್ಟು ಬೆಲೆ ಬಾಳುವ ನಿನ್ನನ್ನು ಕರುಣಿಸಿದ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು. ಆ ದೇವರು ನಿನ್ನ ರೂಪದಲ್ಲಿ ನನಗೆ ತಮ್ಮನನ್ನು ಕರುಣಿಸಿದ್ದಾನೆ. ಈ ಸಮಯದಲ್ಲಿ ದೇವರಿಗೆ ಕೇಳೋದು ಒಂದೇ ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ. ನನ್ನ ಜೀವನದ ಕೊನೆವರೆಗೂ ನಿನ್ನ ಪ್ರೀತಿ ನನಗಿರಲಿ ಅನ್ನೊದೊಂದೇ ನನ್ನ ಪ್ರಾರ್ಥನೆ.
ಕೇವಲ ರಕ್ತ ಸಂಬಂಧದಲ್ಲಿ ಮಾತ್ರ ಅಕ್ಕ-ತಮ್ಮ ಅಥವಾ ಅಣ್ಣ-ತಂಗಿ ಅನ್ನು ಪ್ರೀತಿ ಇರಬೇಕು ಅಂತ ಏನೋ ಇಲ್ಲ ಅಲ್ವಾ. ಕೆಲವೊಮ್ಮೆ ಅನೀರಿಕ್ಷಿತವಾಗಿಯೂ ನಮಗೆ ಆ ಪ್ರೀತಿ ಸಿಗುತ್ತೆ. ಆಗ ಕೇವಲ ಒಬ್ಬ ತಮ್ಮ ಮಾತ್ರಲ್ಲ ಅವನ ಜೊತೆಗೆ ಅವನ ಅಷ್ಟೇ ಪ್ರೀತಿಸುವ ಅಪ್ಪ, ಅಮ್ಮ, ಅಣ್ಣ, ತಮ್ಮ, ಚಿಕ್ಕಿ ಸೇರಿದಂತೆ ಎಲ್ಲರ ಪ್ರೀತಿಯ, ಮಮತೆಯ ವಾತ್ಸಲ್ಯವೊ ನನಗೆ ಸಿಗುತ್ತಿದೆ. ಅವರ ಕುಟುಂಬದಲ್ಲಿ ನಾನು ಒಬ್ಬಳು ಆಗಿದ್ದೇನೆ ಎಂಬ ಖುಷಿ ನನಗಿದೆ.
ಕೆಲವೊಮ್ಮೆ ನನಗೆ ನಾನು ಅದೃಷ್ಟವಂತೆ ಅನಿಸುತ್ತೆ. ನಾನು ನೀನು ಪ್ರೀತಿಯಿಂದ ಬಬುಟಿ ಎಂದು ಹೇಳ್ತಾನೆ. ನಾವಿಬ್ಬರು ಒಬ್ಬರಿಗಿಂತ ಒಬ್ಬರು ಹೆಚ್ಚಾಗಿ ಪ್ರೀತಿ ಮಾಡುತ್ತೇವೆ. ನಮ್ಮಿಬ್ಬರನ್ನು ನೋಡಿ ಹೊಟ್ಟೆ ಉರಿದುಕೊಳ್ಳವವರೇ ಜಾಸ್ತಿ. ನನ್ನ ಸ್ನೇಹಿತರು ನೀನೇ ಅದೃಷ್ಟವಂತೆ ಕಣೆ ಅಂತ ಹೇಳ್ತಾರೆ. ಮನಸ್ಸಿನಲ್ಲಿ ನಮಗೆ ಯಾಕೆ ಈ ರೀತಿ ಇಷ್ಟೊಂದು ಪ್ರೀತಿ ತೋರಿಸೋ ತಮ್ಮ ಇಲ್ಲವೆಂದು ಗೊಣಗಿಕೊಳ್ಳುತ್ತಾರೆ.
ಯಾವ ನಿರೀಕ್ಷೆಯೇ ಇಲ್ಲದೆ ದಿನ ಪ್ರತಿ ಗಿಡದಲ್ಲಿ ಅರಳುವ ಹೂವಿಗೆ ಯಾರನ್ನೂ ಮೆಚ್ಚಿಸುವ ಹಂಗೂ ಇರುವುದಿಲ್ಲ. ಅದಕ್ಕೆ ಎಲ್ಲವೂ ಸಹಜವಾಗಿ ನಿರಾಳವಾಗಿ ಯಾವುದೇ ನಿರೀಕ್ಷೆಗಳಿಲ್ಲದೆ ಪರಿಸರದೊಂದಿಗೆ ಬದುಕುತ್ತಿರುತ್ತವೆ. ಇದೇ ರೀತಿ ನಮ್ಮ ಪ್ರೀತಿಯು ಸಹ ಯಾವ ನಿರೀಕ್ಷೆಯೂ ಇಲ್ಲದೆ ಸಾಗುತ್ತಿದೆ. ಅವನೊಂದಿಗೆ ಕಳೆಯುವ ಪ್ರತಿಯೊಂದು ನಿಮಿಷವೂ ಕೂಡ ಬೆಸ್ಟ್ ಮೂಮೆಂಟ್ ಅನಿಸುತ್ತೆ.
ಇಷ್ಟೆಲ್ಲಾ ಹೇಳ್ತಾ ಇದ್ದಾಳೆ ಅವನು ಯಾರು ಇರಬೇಕೆಂದು ನಿಮಗೆ ಅನಿಸುತ್ತಿದೆ ಅಲ್ವಾ? ಅನಿಸಿರಲೇಬೇಕು. ಅವನೇ ನನ್ನ ಪ್ರಾಣ ಸ್ನೇಹಿತ, ನನ್ನ ಜೀವ, ನನ್ನ ಮುದ್ದು ತಮ್ಮಯ್ಯ ಮೊದಲೇ ಹೇಳಿರುವಂತೆ ಪ್ರೀತಿಯು ಕೇವಲ ಪ್ರೇಮಿಗಳಿಗೆ ಮಾತ್ರ ಸೀಮಿತವಲ್ಲ. ಒಬ್ಬ ನಿಜವಾದ ತಮ್ಮ ಪ್ರೀಮಿಗಿಂತ ಹೆಚ್ಚಾಗಿ ಪ್ರೀತಿಸಬಲ್ಲ. ಅದರಲ್ಲೂ ನನ್ನ ತಮ್ಮನಂತೂ ಯಾವುದರಲ್ಲಿಯೂ ಕಡಿಮೆ ಇಲ್ಲ.
ಅಕ್ಕನ ಕೋರಿಕೆ ಒಂದೇ ಎಲ್ಲಿದ್ದರೂ ಇರಲಿ ತಮ್ಮ… ಸುರಕ್ಷಿತ ರಕ್ಷಾ ಬಂಧನದಿ ಅವನು ರಕ್ಷಿತ… ಸಹೋದರರಾಗಲು ರಕ್ತ ಸಂಬಂಧವೇ ಬೇಕಿಲ್ಲ… ಬೇಕಿದೆ ಸ್ನೇಹ ಪ್ರೀತಿಗಳ ಸಮ್ಮಿಲನ… ಎಲ್ಲ ಬಂಧಗಳ ಮೀರಿದ ಸಂಬಂಧವಿದು… ಜನ್ಮ ಜನ್ಮಗಳ ಅನುಬಂಧವಿದು… ಅಕ್ಕ-ತಮ್ಮನ ರಕ್ಷಾ ಬಂಧನವಿದು… ಲವ್ ಯು ತಮ್ಮಯ್ಯ
Get in Touch With Us info@kalpa.news Whatsapp: 9481252093
Discussion about this post