ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ 2ನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶಿವಮೊಗ್ಗ ನಗರ ಕ್ಷೇತ್ರವನ್ನು ಇದರಲ್ಲೂ ಸಹ ಪ್ರಕಟಿಸದೇ ಸಸ್ಪೆನ್ಸ್ ಉಳಿಸಿಕೊಂಡಿದೆ.
2ನೆಯ ಪಟ್ಟಿಯಲ್ಲಿ ಐವರು ಹಾಲಿ ಶಾಸಕರಿಗೆ ಸೇರಿ, ಈ ಮೂಲಕ ಇಲ್ಲಿವರೆಗೆ ಒಟ್ಟು 13 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ. ಬೆಂಗಳೂರಿನ ಗೋವಿಂದ ರಾಜನಗರ, ಹೆಬ್ಬಾಳ, ಮಹದೇವಪುರ ಈ ಮೂರು ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಒಟ್ಟಿನಲ್ಲಿ ಇನ್ನೂ 12 ಕ್ಷೇತ್ರಗಳನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದೆ.
ಮಾಜಿ ಡಿಸಿಎಂ, ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ನಂತರ ಕ್ಷೇತ್ರದಲ್ಲಿ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಈಶ್ವರಪ್ಪನವರು ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದೇ ಇದ್ದಲ್ಲಿ ಅವರ ಪುತ್ರ ಕಾಂತೇಶ್’ಗೆ ಟಿಕೇಟ್ ನೀಡಬೇಕು ಎಂಬ ಕೂಗು ಜೋರಾಗಿದೆ. ಇದರ ಬೆನ್ನಲ್ಲೇ 2ನೆಯ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲೂ ಸಹ ಶಿವಮೊಗ್ಗ ಕ್ಷೇತ್ರದ ಹೆಸರು ಇಲ್ಲದೇ ಇರುವುದು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
2ನೆಯ ಪಟ್ಟಿಯಲ್ಲಿ ಯಾರಿಗೆ ಟಿಕೇಟ್?
- ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್
- ಬಸವನ ಬಾಗೇವಾಡಿ- ಎಸ್.ಕೆ ಬೆಳ್ಳುಬ್ಬಿ
- ಇಂಡಿ- ಕಾಸಾಗೌಡ ಬಿರಾದಾರ್
- ಗುರಮಿಠಕಲ್- ಲಲಿತಾ ಅನಾಪುರ್
- ಬೀದರ್- ಈಶ್ವರ್ ಸಿಂಗ್ ಠಾಕೂರ್
- ಭಾಲ್ಕಿ- ಪ್ರಕಾಶ್ ಖಂಡ್ರೆ
- ಗAಗಾವತಿ- ಪರಣ್ಣ ಮುನವಳ್ಳಿ
- ಕಲಘಟಗಿ- ನಾಗರಾಜ್ ಛಬ್ಬಿ
- ಹಾನಗಲ್- ಶಿವರಾಜ್ ಸಜ್ಜನರ್
- ಹಾವೇರಿ (ಎಸ್ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್
- ಹರಪ್ಪನಹಳ್ಳಿ- ಕರುಣಾಕರ ರೆಡ್ಡಿ
- ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್
- ದಾವಣಗೆರೆ ದಕ್ಷಿಣ- ಅಜಯ್ ಕುಮಾರ್
- ಮಾಯಕೊಂಡ (ಎಸ್ಸಿ)- ಬಸವರಾಜ್ ನಾಯ್ಕ್
- ಚನ್ನಗಿರಿ- ಶಿವಕುಮಾರ್
- ಬೈಂದೂರು- ಗುರುರಾಜ್ ಗಂಟಿಹೊಳೆ
- ಮೂಡಿಗೆರೆ (ಎಸ್ಸಿ)- ದೀಪಕ್ ದೊಡ್ಡಯ್ಯ
- ಗುಬ್ಬಿ- ಎಸ್.ಡಿ. ದಿಲೀಪ್ ಕುಮಾರ್
- ಶಿಡ್ಲಘಟ್ಟ- ರಾಮಚಂದ್ರ ಗೌಡ
- ಕೋಲಾರ ಗೋಲ್ಡ್ ಫೀಲ್ಡ್ (ಎಸ್ಸಿ)- ಅಶ್ವಿನಿ ಸಂಪAಗಿ
- ಶ್ರವಣ ಬೆಳಗೊಳ- ಚಿದಾನಂದ
- ಅರಸೀಕರೆ- ಜಿವಿ ಬಸವರಾಜ್
- ಹೆಗಡಗಡ ದೇವನ ಕೋಟೆ (ಎಸ್ಟಿ)- ಕೃಷ್ಣ ನಾಯ್ಕ್

ಯಾರಿಗೆ ಟಿಕೆಟ್ ಮಿಸ್?:
- ಹಾವೇರಿ ನೆಹರು ಶಾಸಕ ಓಲೇಕಾರ್
- ಮಾಯಕೊಂಡ ಶಾಸಕ ಲಿಂಗಣ್ಣ
- ಮೂಡಿಗೆರೆ ಶಾಸಕ ಕುಮಾರ್ ಸ್ವಾಮಿ
- ಅರಸೀಕರೆ ಆಕಾಂಕ್ಷಿ ಎನ್.ಆರ್. ಸಂತೋಷ್
- ಚನ್ನಗಿರಿ ಮಾಡಾಳ್ ವಿರೂಪಾಕ್ಷಪ್ಪ
- ಬೈಂದೂರು ಸುಕಮಾರ್ ಶೆಟ್ಟಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















