ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮುಂಬರುವ ಲೋಕಸಭಾ ಚುನಾವಣೆಗೆ #LoksabhaElection2024 ನಿರೀಕ್ಷೆಯಂತೆಯೇ ಬಿಜೆಪಿ #BJP ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇಂದು ಬಿಡುಗಡೆ ಮಾಡಿದ್ದು, 195 ಹೆಸರುಗಳನ್ನು ಘೋಷಣೆ ಮಾಡಿದೆ.
ಇಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನೂ ಸಹ ಘೋಷಣೆ ಮಾಡಿಲ್ಲ.
ಪ್ರಧಾನಿ ನರೇಂದ್ರ ಮೋದಿ #PMModi ಅವರು ವಾರಣಾಸಿಯಿಂದ #Varanasi ಸ್ಪರ್ಧಿಸುತ್ತಿದ್ದು, ಗಾಂಧಿನಗರದಿಂದ ಅಮಿತ್ ಶಾ, ಲಕ್ನೋದಿಂದ ರಾಜನಾಥ್ ಸಿಂಗ್ ಕಣಕ್ಕಿಳಿಯುತ್ತಿದ್ದಾರೆ.
ಇನ್ನು, ಅಮೇಥಿಯಿಂದ ಸ್ಮೃತಿ ಇರಾನಿ, ಕೋಟಾದಿಂದ ಓಂಬಿರ್ಲಾ ಸ್ಪರ್ಧಿಸುತ್ತಿದ್ದು, ನ್ಯೂಡೆಲ್ಲಿಯಿಂದ ದಿ.ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ.
ಯಾವ ಸಮುದಾಯಕ್ಕೆ ಎಷ್ಟು?
- ಮಹಿಳಾ ಅಭ್ಯರ್ಥಿಗಳು-28
- ಯುವಕರು-47
- ಪರಿಶಿಷ್ಟ ಜಾತಿ-27
- ಪರಿಶಿಷ್ಟ ಪಂಗಡ-18
- ಒಬಿಸಿ-57
ಮೊದಲ ಪಟ್ಟಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು?
- ಉತ್ತರ ಪ್ರದೇಶ 51
- ಪಶ್ಚಿಮ ಬಂಗಾಳ 20
- ಮಧ್ಯಪ್ರದೇಶ 24
- ಗುಜರಾತ್-15
- ರಾಜಸ್ಥಾನ-15
- ಕೇರಳದ-12
- ತೆಲಂಗಾಣ-9
- ಅಸ್ಸಾಂ-11
- ಜಾರ್ಖಂಡ್-11
- ಛತ್ತೀಸ್’ಗಢ-11
- ದೆಹಲಿ-5
- ಜಮ್ಮು ಕಾಶ್ಮೀರ-2
- ಉತ್ತರಾಖಂಡ-3
- ಅರುಣಾಚಲ ಪ್ರದೇಶ-2
- ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ ಮತ್ತು ದಮನ್ ಮತ್ತು ದಿಯುನಿಂದ ತಲಾ-1
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post