ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ದೇಶದ ಜನರ ರಕ್ಷಣೆ ಮತ್ತು ಜೀವನದ ಹಿತದೃಷ್ಟಿಯಿಂದ ಕೊರೋನಾ ಪರಿಸ್ಥಿತಿಯನ್ನು ಪ್ರಧಾನ ಮಂತ್ರಿ ನರೇಂದ್ರಮೋದಿಯವರು, ಸಮರ್ಥವಾಗಿ ನಿರ್ವಹಿಸಿದ್ದಾರೆ. ಆದ್ದರಿಂದ ಬಿಜೆಪಿ ಪರ ಜನರ ವಿಶ್ವಾಸವಿದೆ. ಆದ್ದರಿಂದ ಈ ಬಾರೀ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಚಿದಾನಂದ್‌ಗೌಡ ಅವರಿಗೆ ಗೆಲವು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಕ್ಕಳ ಪಾಠ-ಪ್ರವಚನದ ಜೊತೆಗೆ ಚೆಕ್‌ಪೋಸ್ಟ್, ಮನೆಗಣತಿ, ಜಾಗೃತಿ ಶಿಬಿರ ಮುಂತಾದ ಕೆಲಸದಲ್ಲಿ ಕೊರೊನಾ ವಾರಿಯರ್ಸ್ ಮತ್ತು ಆಶಾ ಕಾರ್ಯಕರ್ತೆಯರಿಗಿಂತಲೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಸರ್ಕಾರ, ನೌಕರ ವರ್ಗದವರ ವೇತನಾ ಕಡಿತ ಮಾಡಿಲ್ಲ ಎಂದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕರಿಗೆ ಮೂರು ತಿಂಗಳು ವೇತನ ಇಲ್ಲದ ಕಾರಣ ತೀರಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ರೂಪಿಸುವ ಚಿಂತನೆ ನಡೆಸುತ್ತಿದೆ ಎಂದರು.
ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಈ ಬಾರಿ ಪರಸ್ಪರ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಮಕ್ಕಳ ಮನಸಿನಲ್ಲಿ ಕೀಳಿರಿಮೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಚಂದಾನಂದ್ ಗೌಡ, ವಿಧಾನ ಪರಿಷತ್ತಿನ ಐದು ಜಿಲ್ಲೆಗಳಲ್ಲಿ ಬಿಜೆಪಿ ಪರ ಅಲೆ ಇದೆ. ಮತ್ತು ಪದವೀಧರರ ಯೋಗಕ್ಷೇಮಕ್ಕಾಗಿ ಸಹಕಾರ ಬ್ಯಾಂಕ್, ಸ್ವರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಪದವೀಧರರ ಕೌಶಲ್ಯ ತರಬೇತಿ ಕೇಂದ್ರವನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ತೆರೆಯುವುದಾಗಿ ಹೇಳಿದರು.
ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಚಂದಾನಂದ್ ಗೌಡ ಮಾತನಾಡಿದರು.
ಬಿಜೆಪಿ ಮಂಡಲ್ ಮಾಜಿ ಅಧ್ಯಕ್ಷ ಬಿ.ವಿ.ಸಿರಿಯಣ್ಣ, ಶಿಕ್ಷಕರಾದ ದೊಡ್ಡಯ್ಯ ನಿವೃತ್ತ ಶಿಕ್ಷಕ ಸಾಣಿಕೆರೆ ಹನುಮಂತಪ್ಪ, ಮುಖ್ಯೋಪಾಧ್ಯಯರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ, ಶಿಕ್ಷಕ ನಜೀರ್ ಅಹ್ಮದ್, ಉಪನ್ಯಾಸಕ ಸಿ. ಚನ್ನವೀರಪ್ಪ, ನಾಗರಾಜ, ಮಂಜುನಾಥ್, ಮಹಾಂತೇಶ್, ತಿಪ್ಪೇಸ್ವಾಮಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post