No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Monday, July 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದೇ ಇದ್ದದ್ದೇ ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ?

ಮೋದಿ ಇಲ್ಲಿಗೆ ಬರುವವರೆಗೂ ದಕ್ಷಿಣದಲ್ಲಿ ಬಿಜೆಪಿ ಕುಂಟುವುದು ನಿಶ್ಚಿತ

kalpa News by kalpa News
November 11, 2019
in Army
0
ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದೇ ಇದ್ದದ್ದೇ ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ?
Share on FacebookShare on TwitterShare on WhatsApp

ಇಡೀ ಭಾರತ ದೇಶದಲ್ಲಿ ಮುಖ್ಯವಾಗಿ ಪೌರಾಣಿಕವಾದ ಭೌಗೋಳಿಕವಾಗಿ ಎರಡು ಭಾಗ. ರಾಮಾಯಣದಲ್ಲಿ ಈ ವಿಚಾರ ಅನೇಕ ಕಡೆಯಲ್ಲಿ ಬರುತ್ತದೆ. ಹನುಮಂತನು ವಿಂದ್ಯಾ ಪರ್ವತದಿಂದ ದಕ್ಷಿಣಾಭಿಮುಖವಾಗಿ ಸೀತಾನ್ವೇಷಣೆಗೆ ಹೊರಟದ್ದು, ರಾಮನ ವನವಾಸ ಮಾರ್ಗವೂ ವಿಂದ್ಯಾ ಪರ್ವತದ ಮೇಲಿನಿಂದಲೇ ಸಾಗಿತ್ತು ಎಂಬಿತ್ಯಾದಿ ಉಲ್ಲೇಖ ಇದೆ.

ಸರ್ಪಗಳೂ ವಿಂದ್ಯಾ ಪರ್ವತದಿಂದ ದಕ್ಷಿಣಕ್ಕೇ ವಾಸವಾಗಿದ್ದು ಕೂಡಾ ಇದೆ. ಅಂದರೆ ವಿಂದ್ಯಾ ಪರ್ವತದಿಂದ ಉತ್ತರಕ್ಕೆ ಕೈಲಾಸದವರೆಗೆ ಅದು ಶಿವನ ಕ್ಷೇತ್ರವೂ, ದಕ್ಷಿಣಕ್ಕೆ ಸೇನಾನಿ ಸುಬ್ರಹ್ಮಣ್ಯನ ಕ್ಷೇತ್ರವೂ ಆಗುತ್ತದೆ. ಈ ಮಧ್ಯೆ ತಿರುಪತಿ, ರಾಮ ಕ್ಷೇತ್ರ ಇತ್ಯಾದಿ ವಿಷ್ಣು ಸಾನ್ನಿಧ್ಯವೂ ಇದ್ದರೂ, ಭಾರತಕ್ಕೆ ಪ್ರಧಾನ ಈ ಎರಡು ಕ್ಷೇತ್ರ.

ವಿಂದ್ಯಾ ಪರ್ವತ
ಸೇನಾಧಿಪತಿಯ ಅನುಗ್ರಹವಿಲ್ಲದೇ ಯುದ್ಧ ಗೆಲುವು ಅಸಾಧ್ಯ

ತಾರಕಾಸುರನ ವಧೆಗಾಗಿ ಸ್ಕಾಂದ ಮತ ಪ್ರವರ್ತಕನಾಗಿ ಇಳಿದದ್ದೇ ಸ್ಕಂದ. ಇವನನ್ನು ಕಾರ್ತಿಕೇಯ, ಸುಬ್ರಹ್ಮಣ್ಯ ಇತ್ಯಾದಿ ಹೆಸರುಗಳಿಂದ ಪೂಜಿಸಿದರು. ಶಿವನ ಸೈನ್ಯಕ್ಕೆ ಪ್ರಧಾನ ಸೇನಾನಿಯೇ ಸುಬ್ರಹ್ಮಣ್ಯ. ಇವನು ಸಂಕರ್ಷಣಾ ರೂಪಿ ಭಗವಾನ್ ವಾಸುದೇವನ ಒಂದು ಪ್ರಧಾನ ಶಕ್ತಿ. ಸೇನಾಧಿಪತಿಯ ಅನುಗ್ರಹ ಇಲ್ಲದಿದ್ದರೆ ಯುದ್ಧದಲ್ಲಿ ಗೆಲುವು ಬರಲಾರದು ಎಂಬುದು ಸಾಮಾನ್ಯನಿಗೂ ಗೊತ್ತಿರುವ ವಿಚಾರ. ಅಲ್ಲದೆ ದಕ್ಷಿಣ ಭಾರತದ ಕುಕ್ಕೇ ಸುಬ್ರಹ್ಮಣ್ಯವು ತಾರಕಾಸುರನ ದಕ್ಷಿಣದ ಕೋಶಾಗಾರ. ಇದು ನಾಗ ಶಕ್ತಿಗಳ ಪ್ರಧಾನ ಕೇಂದ್ರ. ವಿಂದ್ಯಾ ಪರ್ವತದಿಂದ ದಕ್ಷಿಣಕ್ಕೆ ಸುಬ್ರಹ್ಮಣ್ಯ ಕ್ಷೇತ್ರವೇ ಆಗುತ್ತದೆ.

ಕುಕ್ಕೇ ಸುಬ್ರಹ್ಮಣ್ಯ
ಉತ್ತರದಲ್ಲಿ ನಾಗ ದೋಷ ಕಡಿಮೆಯೇ

ಸಂಕಲ್ಪಗಳಲ್ಲಿ ಬ್ರಹ್ಮ ಕ್ಷೇತ್ರ, ಗೋಕರ್ಣ ಕ್ಷೇತ್ರ, ಪರಶುರಾಮ ಕ್ಷೇತ್ರ ಇತ್ಯಾದಿ ವಿಂಗಡಣೆಗಳು ಒಂದು ರೀತಿಯ ಬೌಗೋಳಿಕ ತಿಳುವಳಿಕೆಯಾಗುತ್ತದೆಯಷ್ಟೆ. ಆದರೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಶಿವ ಕ್ಷೇತ್ರವೇ ಭಾರತದ ಪ್ರಧಾನ ಕ್ಷೇತ್ರಗಳಾಗಿವೆ. ಸಾಮಾನ್ಯವಾಗಿ ವಿಂದ್ಯಾ ಪರ್ವತದ ಉತ್ತರದ ಈ ಶಿವಕ್ಷೇತ್ರದಲ್ಲಿ ನಾಗ ದೋಷ ಕಡಿಮೆ. ನಾಗ ಹತ್ಯೆಯಾದರೆ ನೈಸರ್ಗಿಕವಾಗಿ ಅಪರಾಧವೇ ಆದರೂ, ಸಂತತಿ, ಪೀಳಿಗೆಗೆ ದೋಷ ಬರುವುದಿಲ್ಲ. ಆದರೆ ವಿಂದ್ಯಾ ಪರ್ವತದ ದಕ್ಷಿಣ ಭಾಗಕ್ಕೆ ನಾಗ ದೋಷಗಳು ಬಾಧಿಸುತ್ತದೆ. ತಮಿಳುನಾಡಿನಲ್ಲಿ, ಆಂಧ್ರದಲ್ಲಿ, ಕೇರಳಗಳಲ್ಲಿ ಸುಬ್ರಹ್ಮಣ್ಯ ಸಾನ್ನಿಧ್ಯಗಳಿದ್ದಷ್ಟು ಉತ್ತರ ಭಾರತದಲ್ಲಿ ಇಲ್ಲ. ಕನ್ಯಾಕುಮಾರಿಯಿಂದ ಮಹಾರಾಷ್ಟ್ರದವರೆಗೆ ನಾಗ ಲೋಕವೇ ಆಗಿರುವುದರಿಂದ ಇದು ಸುಬ್ರಹ್ಮಣ್ಯನಿಗೆ ಸಂಬಂಧಿಸಿದ ಕ್ಷೇತ್ರವೇ. ಈ ಸುಬ್ರಹ್ಮಣ್ಯನನ್ನು ಕಡೆಗಣಿಸಿದರೆ ತೊಂದರೆಗಳು ಸೃಷ್ಟಿಯಾಗುತ್ತದೆ.ರಾಜಕೀಯವಾಗಿ ಸಂಘಟನೆಗಳಲ್ಲಿ ಒಡಕುಗಳು, ಭಿನ್ನ ಮತ ಸೃಷ್ಟಿಯಾಗುತ್ತದೆ. ಯಾಕೆಂದರೆ ಸುಬ್ರಹ್ಮಣ್ಯನು ಸೇನಾನಿ(Defence Chief).

ಮೋದಿ ಪ್ರಧಾನಿಯಾದ ಮೇಲೆ ಇಲ್ಲಿಗೆ ಬರಬೇಕಿತ್ತು

ಈಗ ಇದನ್ನು ಉತ್ತರದವರು ಕಡೆಗಣಿಸಿದ್ದಾರೆ. ಅಂದರೆ ಪ್ರಜೆಗಳು ಬರುವುದಿಲ್ಲವೋ ಎಂದಲ್ಲ. ಪ್ರಜಾಪ್ರತಿನಿಧಿಗಳು ವೈಯಕ್ತಿಕವಾಗಿ ಬಂದರೂ, ದೇಶದ ಸ್ವಾಸ್ಥ್ಯಕ್ಕಾಗಿ ಬರಲಿಲ್ಲ. ಪ್ರಧಾನಮಂತ್ರಿ ಮೋದಿಯವರನ್ನೇ ನೋಡಿ. ಪ್ರಧಾನಮಂತ್ರಿಯಾದ ಮೇಲೆ ರಾಜ ಮರ್ಯಾದೆಯಲ್ಲಿ ಬಂದು ದೇವರ ದರ್ಶನ ಮಾಡಬೇಕಿತ್ತು. ಆದರೆ ಅವರಿಗೆ ಈ ತಿಳುವಳಿಕೆ ಕೊಡುವವರಿಲ್ಲ. ಇದರ ಫಲವಾಗಿ ಕರ್ನಾಟಕದಲ್ಲಿ ಬಿಜೆಪಿ ಇದ್ದರೂ ಡೋಲಾಯಮಾನದಲ್ಲಿ ಸ್ಪಷ್ಟ ಬಹುಮತದಲ್ಲಿ ಇಲ್ಲ. ಒಂದೊಮ್ಮೆ ಇದ್ದರೂ ಅದು ಒಡೆದು ಹೋಯ್ತು. ತಮಿಳುನಾಡಿನಲ್ಲಿ, ಕೇರಳದಲ್ಲಿ ಬಿಜೆಪಿಯ ಒಂದು ಬೀಜವೂ ನೆಲಕ್ಕೆ ಬೀಳದ ಸ್ಥಿತಿಯಲ್ಲಿದೆ. ಬಿದ್ದರೆ ಮಾತ್ರವಲ್ಲವೇ ಮೊಳಕೆ ಬರುವುದು? ಇನ್ನು ಆಂಧ್ರದಲ್ಲೂ ಬಿಜೆಪಿಯು ಬಲಿಷ್ಟ ಇಲ್ಲ. ಗೋವಾದಲ್ಲೂ ಬಿಜೆಪಿ ಇರಿಸು ಮುರಿಸಿನಲ್ಲೇ ಇದೆ. ಹಿಂದೆ ಕಾಂಗ್ರೆಸ್ ಇರುವಾಗಲೂ ಇದೇ ರೀತಿ ಇತ್ತು. ಕಾರಣ ಸುಬ್ರಹ್ಮಣ್ಯನನ್ನು ಕಡೆಗಣಿಸಿದ ಫಲ. ಬಹಳ ಪೂರ್ವದಲ್ಲಿ ಚಂಪಾ ಮಹರಾಜರು ಸುಬ್ರಹ್ಮಣ್ಯನಿಗೆ ಸಹಸ್ರ ಪುತ್ಥಳಿಯಲ್ಲಿ ಅರ್ಚನೆ ಮಾಡಿ ಬಲಿಷ್ಟರೂ ಆದರು ಮತ್ತು ಚರ್ಮವ್ಯಾಧಿಯಿಂದ ಮುಕ್ತರಾದರು.

ದಕ್ಷಿಣ ಭಾರತಕ್ಕೆ (ಪುರಾಣ ಪ್ರಕಾರ) ಸೇರಿದ ಮಹಾರಾಷ್ಟ್ರದಲ್ಲೂ ಬಿಜೆಪಿ ವಂಚಿತವಾದದ್ದು ಮಾತ್ರವಲ್ಲ, ಅತಂತ್ರ ಸರಕಾರವೂ ಆಗಿ, ಪ್ರಜೆಗಳಿಗೆ ಹೊರೆಯಾಗುತ್ತಿದೆ. ಕೇರಳದಲ್ಲಿ ವಾಮವಾದಿಗಳದ್ದೇ ರಾಕ್ಷಸ ಪ್ರವೃತ್ತಿ) ಕಾರುಬಾರ. ತಮಿಳುನಾಡಿನಲ್ಲೂ ಪ್ರಕಾರ ಪ್ರಾದೇಶಿಕ ಪಕ್ಷಗಳ ವ್ಯಕ್ತಿ ಪೂಜೆ ನಡೆಯುತ್ತಿದೆ. ಪ್ರಧಾನಮಂತ್ರಿ ಎಂದರೆ ಚಕ್ರವರ್ತಿಗೆ ಸಮಾನ. ಅಂತಹ ಪ್ರಧಾನಮಂತ್ರಿಯ ಕೆಲಸ ಈ ದಕ್ಷಿಣ ದೇಶದಲ್ಲೆಲ್ಲೂ ನಡೆಯುವುದೇ ಇಲ್ಲ. ಇದಕ್ಕೆ ಕಾರಣ ಸುಬ್ರಹ್ಮಣ್ಯ ಸ್ಮರಣೆ ಇಲ್ಲದಾದದ್ದು. ಹಾಗಾಗಿ ದಕ್ಷಿಣವು ಚಕ್ರವರ್ತಿಗಳ(ಪ್ರಧಾನಮಂತ್ರಿಗಳ) ವ್ಯಾಪ್ತಿಯಲ್ಲಿ ವಿಜ್ರಂಭಿಸಬೇಕಾದರೆ ನರೇಂದ್ರ ಮೋದಿಯವರು ಸುಬ್ರಹ್ಮಣ್ಯಕ್ಕೆ ಬಂದು ಸುಬ್ರಹ್ಮಣ್ಯನಿಗೆ ಸುವರ್ಣ ಪುಷ್ಪ ಅರ್ಚನೆ ಮಾಡಲೇಬೇಕು.

ಮೋದಿ ಇಲ್ಲಿಗೆ ಬರುವವರೆಗೂ ಬಿಜೆಪಿ ಕುಂಟುವುದು ನಿಶ್ಚಿತ

ಎಂದಿನವರೆಗೆ ಅವರು ಬರುವುದಿಲ್ಲವೋ ಅಂದಿನವರೆಗೆ ಭಾರತೀಯ ಜನತಾ ಪಕ್ಷ ಹೀಗೆಯೇ ಕುಂಟುವುದು ನಿಶ್ಚಿತ. ರಾಮ ಜನ್ಮ ಭೂಮಿಗಾಗಿ(ಧರ್ಮ) ಹುಟ್ಟಿಕೊಂಡಿತು ಬಿಜೆಪಿ ಪಕ್ಷ. ಉತ್ತರದಲ್ಲಿ ಫಲ ಸಿಕ್ಕಿದೆ. ಹಾಗೆಯೇ ದಕ್ಷಿಣದಲ್ಲಿ ಫಲ ಸಿಗಬೇಕಾದರೆ, ಕುಕ್ಕೇ ಸುಬ್ರಹ್ಮಣ್ಯನ ದರ್ಶನವನ್ನು ನರೇಂದ್ರ ಮೋದಿಯವರು ಮಾಡಲೇಬೇಕಿದೆ. ಇದೊಂದು ಕೋಮುವಿಚಾರ ಎಂದು ಯಾರಾದರೂ ನಿಂದಿಸಿದರೆ ಅದು ಅವರ ತಿಳುವಳಿಕೆ ರಹಿತ ಹೇಳಿಕೆಯಷ್ಟೆ. ಸುಬ್ರಹ್ಮಣ್ಯನು ಸೇನಾನಿ. ಹೇಗೆ ದೇಶದ ಪ್ರಧಾನ ದಂಡ ನಾಯಕನೋ ಹಾಗೆಯೇ ಇದು. ದಂಡನಾಯಕನನ್ನು ಕೋಮುವಾದಿ ಎಂದು ಮೂರ್ಖರು ಮಾತ್ರ ಹೇಳಬಹುದಷ್ಟೆ. ನಿಂದಕರು ನಿಂದಿಸಲಿ. ನಮಗೇನೂ ಬಾಧೆ ಇಲ್ಲ. ನಮಗೆ ಬಾಧೆ ಇರುವುದು ಸುಬ್ರಹ್ಮಣ್ಯನನ್ನು ಮರೆತಾಗ ಮಾತ್ರ.

Get In Touch With Us info@kalpa.news Whatsapp: 9481252093

Tags: BJPDefence ChiefKannada ArticleKarnatakaKukke Shri Subrahmanya templeMaharashtraPM Narendra ModiPrakash AmmannayaTirupatiಕುಕ್ಕೆ ಸುಬ್ರಹ್ಮಣ್ಯಗೋಕರ್ಣ ಕ್ಷೇತ್ರತಿರುಪತಿಪ್ರಕಾಶ್ ಅಮ್ಮಣ್ಣಾಯಪ್ರಧಾನಿ ನರೇಂದ್ರ ಮೋದಿಬಿಜೆಪಿರಾಮಾಯಣವಿಂದ್ಯಾ ಪರ್ವತ
Share312Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗೌರಿಬಿದನೂರು: ಆಧುಕಿನ ತಂತ್ರಜ್ಞಾನದಿಂದ ಹೆಚ್ಚಿನ ಇಳುವರಿ ತೆಗೆಯಲು ಸಲಹೆ

Next Post

ನಿವೃತ್ತಿಗೆ ಮೊದಲು ಮತ್ತೆ ಹಲವು ಐತಿಹಾಸಿಕ ತೀರ್ಪು ನೀಡಲಿದ್ದಾರಾ ಸಿಜೆಐ ರಂಜನ್ ಗೊಗೋಯ್?

kalpa News

kalpa News

Next Post
ನಿವೃತ್ತಿಗೆ ಮೊದಲು ಮತ್ತೆ ಹಲವು ಐತಿಹಾಸಿಕ ತೀರ್ಪು ನೀಡಲಿದ್ದಾರಾ ಸಿಜೆಐ ರಂಜನ್ ಗೊಗೋಯ್?

ನಿವೃತ್ತಿಗೆ ಮೊದಲು ಮತ್ತೆ ಹಲವು ಐತಿಹಾಸಿಕ ತೀರ್ಪು ನೀಡಲಿದ್ದಾರಾ ಸಿಜೆಐ ರಂಜನ್ ಗೊಗೋಯ್?

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL