ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮುಂಬೈ: ದೇಶದಲ್ಲಿ ಅತಿ ಹೆಚ್ಚು ದೇಣಿಗೆ ಪಡೆದುಕೊಂಡ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದು, 2018-19ನೆಯ ಹಣಕಾಸು ವರ್ಷದಲ್ಲಿ ಬರೋಬ್ಬರಿ 365 ಕೋಟಿ ರೂ.ಗಳ ದೇಣಿಗೆಯನ್ನು ಪಕ್ಷ ಪಡೆದಿದೆ.
ಈ ಕುರಿತಂತೆ ಚುನಾವಣಾ ಆಯೋಗ ಮಾಹಿತಿ ಬಿಡುಗಡೆ ಮಾಡಿದ್ದು, 2018 ಮತ್ತು 2019ರಲ್ಲಿ ಬಿಜೆಪಿ 473 ಕೋಟಿ ರೂ.ಗಳನ್ನು ಬೇರೆ ಬೇರೆ ಕಾರ್ಪೋರೇಟ್ ಸಂಸ್ಥೆಗಳಿಂದ ಸಂಗ್ರಹಿಸಿದೆ.
ಬಿಜೆಪಿ ಸಂಗ್ರಹಿಸಿರುವ ದೇಣಿಯಲ್ಲಿ ಟಾಟಾ ಗ್ರೂಪ್ ಶೇ. 75ರಷ್ಟು ಹಣವನ್ನು ನೀಡಿದ್ದು, 2017-18ರಲ್ಲಿ ಪಕ್ಷ ಕೇವಲ 167 ಕೋಟಿ ರೂ. ದೇಣಿಗೆಯನ್ನು ಸಂಗ್ರಹಿಸಿಕೊಂಡಿದೆ.
Get In Touch With Us info@kalpa.news Whatsapp: 9481252093






Discussion about this post