ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆಂತರಿಕ ಬಿಕ್ಕಟ್ಟು ಮುಂದುವರೆದ ಬೆನ್ನಲ್ಲೇ, ಸದ್ಯದಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿರುವುದು ಕುತೂಹಲ ಕೆರಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿಕಾರ ಹಿಡಿಯುವ ಸಂಖ್ಯೆಗಳು ಬಿಜೆಪಿ ಬಂದರೆ ಸರ್ಕಾರ ರಚನೆಗೊಳ್ಳಲಿದೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರ ಸಭೆಯನ್ನು ಹಾಸನದಲ್ಲಿ ನಡೆಸುವುದು, ರೆಸಾರ್ಟ್ ನಲ್ಲಿ ನಡೆಸುವುದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಜೊತೆ ಬೆಂಬಲಿಗರ ಶಾಸಕರನ್ನ ಕರೆದುಕೊಂಡು ಹೋಗುವುದನ್ನ ಗಮನಿಸಿದರೆ ಶಾಸಕರಲ್ಲೇ ಸರ್ಕಾರ ಮುಂದುವರೆಯುವ ಭರವಸೆ ಇಲ್ಲವಾಗಿದೆ ಎಂದರು.
ಒಳಗೊಳಗೆ ಜನಾಭಿಪ್ರಾಯನೂ ಸಹ ಸರ್ಕಾರ ಬೀಳುವ ಬಗ್ಗೆನೇ ಇರುವುದರಿಂದ ಶೀಘ್ರವಾಗಿಯೇ ಬಿಜೆಪಿ ಸರ್ಕಾರ ರಚನೆಯ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದರು.

















