ಮುಂಬೈ: ಬಾಲಿವುಡ್ ಖ್ಯಾತ ನಟಿ ಸೋನಾಲಿ ಬೇಂದ್ರೆ ಹೈಗ್ರೇಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಬಹಿರಂಗಗೊಂಡಿದ್ದು, ಸ್ವತಃ ಸೋನಾಲಿ ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಾನು ಹೈಗ್ರೇಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇದಕ್ಕಾಗಿ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದಾರೆ.
ತಮ್ಮ ಮನದಾಳದ ಮಾತನ್ನು ತೋಡಿಕೊಂಡಿರುವ ಸೋನಾಲಿ, ಜೀವನದಲ್ಲಿ ನೀವು ಕೆಲವೊಮ್ಮೆ ಕಡಿಮೆ ಮಟ್ಟದ್ದನ್ನು ನಿರೀಕ್ಷಿಸುತ್ತೀರಿ. ಆದರೆ, ಜೀವನ ಮಾತ್ರ ಕಾರ್ವ್ ಬಾಲನ್ನು ಎಸೆಯುತ್ತದೆ. ನನಗೆ ಕ್ಯಾನ್ಸರ್ ಬರುತ್ತದೆ ಎಂದು ನಾನು ತಿಳಿದುಕೊಂಡಿರಲಿಲ್ಲ. ಕೆಲವು ನೋವು ನನ್ನನ್ನು ಬಾಧಿಸತೊಡಗಿದಾಗ ತಜ್ಞರನ್ನು ಪರೀಕ್ಷೆ ಮಾಡಿಸಿದೆ. ಆ ವೇಳೆ ಈ ವಿಚಾರ ಹೊರಬಂದಿದೆ. ಆದರೆ, ನನ್ನ ಕುಟುಂಬಸ್ಥರು ಹಾಗೂ ಆಪ್ತರು ನನ್ನೊಂದಿಗೆ ಬೆಂಬಲವಾಗಿ ನಿಂತು ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ನಾನು ಅವರಿಗೆ ಋಣಿಯಾಗಿದ್ದೇನೆ ಎಂದಿದ್ದಾರೆ.
— Sonali Bendre Behl (@iamsonalibendre) July 4, 2018
ಇದನ್ನು ಹೋಗಲಾಡಿಲು ಬೇರೆ ದಾರಿಯಿಲ್ಲ, ಕೂಡಲೇ ಚಿಕಿತ್ಸೆ ಪಡೆಯುವುದೊಂದೇ ಮಾರ್ಗವಾಗಿದ್ದು, ನಾನು ನ್ಯೂಯಾರ್ಕ್ ನಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದಾರೆ.
ನಾವು ಆಶಾವಾದಿಯಾಗಿದ್ದುಕೊಂಡು ಪ್ರತಿ ಹಂತದಲ್ಲೂ ದೃಢ ಸಂಕಲ್ಪ ಮಾಡಿ ಹೋರಾಟ ನಡೆಸಬೇಕು. ಕಳೆದ ಕೆಲವು ದಿನಗಳಿಂದ ನಾನು ಅಪರಿಮಿತ ಪ್ರೀತಿ ಹಾಗಬ ಬೆಂಬಲ ಪಡೆಯುತ್ತಿದ್ದೇನೆ, ನಾನು ನಿಜವಾಗಿಯೂ ಅದಕ್ಕೆ ಋಣಿ ಆಗಿದ್ದೇನೆ, ಇದರ ವಿರುದ್ಧ ನಾನು ಹೋರಾಡುತ್ತೇನೆ. ನನ್ನ ಕುಟುಂಬಸ್ಥರು ಹಾಗೂ ನನ್ನ ಆಪ್ತ ಸ್ನೇಹಿತರು ನನ್ನ ಬೆನ್ನ ಹಿಂದೆ ಇರುವುದೇ ನನಗೆ ಬಲ ತಂದಿದೆ ಎಂದು ಸೋನಾಲಿ ಹೇಳಿಕೊಂಡಿದ್ದಾರೆ.
















