ಮುಂಬೈ: ತೀರಾ ಅಪರೂಪದಲ್ಲಿ ಅಪರೂಪ ಎನ್ನುವಂತೆ ಬಾಲ್ಯ ವಿವಾಹವೊಂದನ್ನು ಬಾಂಬೆ ಹೈಕೋರ್ಟ್ ಮಾನ್ಯ ಮಾಡಿರುವ ಪ್ರಕರಣ ನಡೆದಿದೆ.
ಮಹಾರಾಷ್ಟ್ರದ 56 ವರ್ಚದ ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯ ವಿವಾಹವಾಗಿದ್ದು, ಇದನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ದಾಖಲೆಯೊಂದನ್ನು ಬರೆದಿದೆ.
ಪ್ರಕರಣದ ಹಿನ್ನೆಲೆ:
2014ರಲ್ಲಿ ಮಹಾರಾಷ್ಟ್ರದ 56 ವರ್ಷದ ವಕೀಲರೊಬ್ಬರು 14 ವರ್ಷದ ಬಾಲಕಿಯನ್ನು ವಿವಾಹವಾಗಿದ್ದರು. ಆದರೆ, ಆನಂತರ ಬಾಲಕಿ ಅತ್ಯಾಚಾರದ ದೂರನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಳು. ಹೀಗಾಗಿ, ಬಂಧನಕ್ಕೊಳಗಾದ ವಕೀಲ 10 ತಿಂಗಳು ಜೈಲುವಾಸವನ್ನೂ ಸಹ ಅನುಭವಿಸಿದ್ದರು.
ಆದರೆ, ಬಾಲಕಿಗೆ 18 ವರ್ಷ ತುಂಬಿದ ನಂತರ ಸಂಧಾನ ನಡೆಸಿದ್ದು, ಪರಿಣಾಮ ಒಟ್ಟಾಗಿ ಬಾಳುವಂತೆ ಮನವೊಲಿಸಿ, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದರು. ಇದನ್ನು ಕೋರ್ಟ್ ಮಾನ್ಯ ಮಾಡಿದ್ದು, ಒಟ್ಟಾಗಿ ಬಾಳುವಂತೆ ಸಲಹೆ ನೀಡಿದೆ.

















