ಬೆಂಗಳೂರು: ಗಾಂಧಿನಗರದಲ್ಲಿ ಅಡಿಯಿಟ್ಟು ಜಗತ್ತಿನಾದ್ಯಂತ ಸಂಚಲನ ಸೃಷ್ಠಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ಬಿಡುಗಡೆಯಾಗಿ ಐದೇ ದಿನದಲ್ಲಿ 100 ಕೋಟಿ ರೂ.ಗಳ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ದೇಶದ ಸಿನಿಮಾ ವಿಶ್ಲೇಷಕರು ನಿರಂತರವಾಗಿ ಚಿತ್ರದ ಕುರಿತು ವಿಶ್ಲೇಷಣೆ ಮಾಡುತ್ತಿದ್ದು, ಇದರಂತೆ ಈಗಾಗಲೇ ಚಿತ್ರ 100 ಕೋಟಿ ರೂ.ಗಳ ಗಳಿಕೆಯನ್ನು ದಾಟಿದೆ. ಈ ಮೂಲಕ ಜಗತ್ತಿನಾದ್ಯಂತ 100 ಕೋಟಿ ರೂ. ಗಳಿಸಿದ ಮೊಟ್ಟಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ ಪಾತ್ರವಾಗಿದೆ.
#KGF continues its upward trend… Day 5 [#Christmas] is bigger than Day 1, Day 2, Day 3 and Day 4, which is a rarity… Fri 2.10 cr, Sat 3 cr, Sun 4.10 cr, Mon 2.90 cr, Tue 4.35 cr. Total: ₹ 16.45 cr. India biz. Note: HINDI version.
— taran adarsh (@taran_adarsh) December 26, 2018
ಚಿತ್ರ, ಕ್ರಿಸ್ ಮಸ್ ರಜಾದಿನಗಳ ಸಂಪೂರ್ಣ ಬೆಂಬಲವನ್ನು ಕೆಜಿಎಫ್ ಪಡೆದುಕೊಂಡಿದ್ದು, ಪ್ರಮುಖವಾಗಿ ತೆಲುಗು ಮತ್ತು ತಮಿಳು ಅವತರಣಿಕೆಯಲ್ಲಿನ ಸ್ಕ್ರೀನ್ ಗಳ ಸಂಖ್ಯೆ ಕೂಡ ಕೆಜಿಎಫ್ ಚಿತ್ರದ ಗಳಿಕೆಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎನ್ನಲಾಗಿದೆ.
ಯಾವ ಭಾಷೆಯಲ್ಲಿ ಎಷ್ಟು ಗಳಿಸಿದೆ?
- ಕನ್ನಡ: 62 ಕೋಟಿ ರೂ.
- ತೆಲುಗು: 7.30 ಕೋಟಿ ರೂ.
- ಕೇರಳ: 1.60 ಕೋಟಿ ರೂ.
- ತಮಿಳುನಾಡು: 4.50 ಕೋಟಿ ರೂ.
- ಆರ್‌ಒಐ: 22 ಕೋಟಿ ರೂ.
- ಓವರ್‌ಸೀಸ್: 4.50 ಕೋಟಿ ರೂ.
- ಒಟ್ಟಾರೆಯಾಗಿ ಐದು ದಿನಕ್ಕೆ 101.90 ಕೋಟಿ ರೂ. ಗಳಿಕೆ
- ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ.
- ಎರಡನೆಯ ದಿನದ ಕಲೆಕ್ಷನ್ ಸುಮಾರು 40 ಕೋಟಿ ರೂ.
- ಮೂರನೆಯ ದಿನದ ಕಲೆಕ್ಷನ್ 58 ಕೋಟಿ ರೂ.
- ನಾಲ್ಕನೆಯ ದಿನದ ಕಲೆಕ್ಷನ್ ಅಂದಾಜು 77 ಕೋಟಿ ರೂ.
- ಐದನೆಯ ದಿನಕ್ಕೆ ನೂರು ಕೋಟಿ ರೂ. ಗಡಿ ದಾಟಿದೆ.
#KGF Telugu states 5 days Gross 7.30 CR Approx. Set to become successful film in AP/TS by this Friday🤘
Expecting 15 CR+ gross in full run👍
— Raghu Nandan Reddy (@Ragsblr) December 26, 2018
Discussion about this post