ಕಲ್ಪ ಮೀಡಿಯಾ ಹೌಸ್ | ಬ್ರಹ್ಮಾವರ |
ಆಟವಾಡುತ್ತಿದ್ದ ಬಾಲಕನೋರ್ವ ಮನೆಯ ಪಕ್ಕದ ನೀರಿನ ಹೊಂಡಕ್ಕೆ ಬಿದ್ದು, ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಉಪ್ಪೂರು ತೆಂಕಬೆಟ್ಟುವಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ಲಾರೆನ್ ಲೂವಿಸ್(5) ಎಂದು ಗುರುತಿಸಲಾಗಿದೆ. ಕುವೈಥ್‌ನಲ್ಲಿ ವಾಸವಾಗಿದ್ದ ಲಾರೆನ್ ಕುಟುಂಬ ಇತ್ತೀಚೆಗಷ್ಟೇ ಊರಿಗೆ ಮರಳಿತ್ತು. ಬಾಲಕ ಮನೆಯ ಬಳಿಯಲ್ಲಿ ಆಟವಾಡುತ್ತಿದ್ದ ವೇಳೆ ಕಾಲುಜಾರಿ ನೀರಿನ ಹೊಂಡಕ್ಕೆ ಬಿದ್ದು, ಈಜು ಬಾರದೇ ಮೃತನಾಗಿದ್ದಾನೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















