ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ದೊಡ್ಡ ಅಲೆ ಮೂಡಿಸಿರುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. New age Film Makers ನಮ್ಮ ಚಿತ್ರರಂಗವನ್ನು ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಸಿರುವುದು ಹೆಮ್ಮೆಯ ವಿಚಾರ. ಕಥಾವಸ್ತು ಹಾಗು ಕಥೆ ಆಧಾರಿತ ಸಿನಿಮಾಗಳು ಈಗಾಗಲೆ ಪ್ರೇಕ್ಷಕರ ಮನಸೆಳೆದಿರುವುದು ಬಹುತೇಕ ಸತ್ಯ. ಇಂತಹಒಂದು ಹೊಸ ಅಲೆಯಲ್ಲಿ, ಹೊಸ ಕನಸುಗಳನ್ನು ಕಟ್ಟಿಕೊಂಡು, ಹೊಸ ಹುಮ್ಮಸ್ಸಿನಿಂದ ಪ್ರೇಕ್ಷಕರಿಗೆ ಒಂದು ವಿನೂತನವಾದ ಕಥೆಯನ್ನು ಹೇಳಲು ಹೊರಟಿದೆ ‘ಬ್ರಾಹ್ಮಿ’ ಚಿತ್ರತಂಡ.
‘ಬ್ರಾಹ್ಮಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಸವನಗುಡಿಯಲ್ಲಿರುವ ರಾಯರ ಮಠದಲ್ಲಿ ನೆರೆವೇರಿತು. ಹಿರಿಯ ಛಾಯಾಗ್ರಾಹಕರಾದ ಜಿ.ಎಸ್. ಭಾಸ್ಕರ್ ಅವರು ಕ್ಯಾಮೆರ ಚಾಲನೆ ಮಾಡಿದರು ಹಾಗೂ ಹಿರಿಯ Photo Journalist ಡಿ.ಸಿ. ನಾಗೇಶ್ ರವರು ಆರಂಭ ಫಲಕ ತೋರಿದರು.
ಈ ಹಿಂದೆ ಉರ್ವಿ ಎಂಬ ಸಿನಿಮಾ ನಿರ್ದೇಶಿಸಿದ್ದ ಪ್ರದೀಪ್ ವರ್ಮ ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಬೆಳದಿಂಗಳ ಬಾಲೆ ನಟಿ ಸುಮನ್ ನಗರ್ಕರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆ ಖ್ಯಾತ ನಟ ರಮೇಶ್ ಭಟ್‌ರವರು ವಿಶಿಷ್ಟವಾದ ಪಾತ್ರದಲ್ಲಿ ಜನರ ಮನಸ್ಸನ್ನುಗೆಲ್ಲಲು ಸಜ್ಜಾಗಿದ್ದಾರೆ.
ಈ ಸಿನಿಮಾ ಸುಮನ್ ನಗರ್ಕರ್‌ರವರ ನೂತನ, ನಿರ್ಮಾಣ ಸಂಸ್ಥೆಯಾದ “”SumanNagarkar Productions” banner ” ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇವರ ಶ್ರಮಕ್ಕೆ ಕೈಜೋಡಿಸಿದವರು Mayur Motion Pictures ದ ಮಂಜುನಾಥ್ ಹಾಗೂ Prayog Studioನ ಪ್ರದೀಪ್‌ಕುಮಾರ್. ಸುಮನ್ ನಗರ್ಕರ್ ಅವರ ಪತಿ ಗುರು(ಗುರುದೇವ್ ನಾಗರಾಜ್) ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಈ Musical Thriller ಚಿತ್ರಕ್ಕೆ ಸಂಭಾಷಣೆ ಬರೆದವರು ರಂಗಕರ್ಮಿ, ಬರಹಗಾರ ಅಭಿಷೇಕ್ ಅಯ್ಯಂಗಾರ್. ಕಿರಣ್ ಕಾವೇರಪ್ಪ ಚಿತ್ರದ ಗೀತರಚನೆಕಾರರು.
ಬ್ರಾಹ್ಮಿ ಅರ್ಥಾತ್ ಸರಸ್ವತಿ, ಕಲೆ ಹಾಗೂ ವಿದ್ಯೆಗೆ ಆರಾಧ್ಯದೇವಿ ಸರಸ್ವತಿಯೇ, ಈ ಸಿನಿಮಾದ ಮುಖ್ಯ ಕಥಾವಸ್ತು. ‘‘ಆಧ್ಯ’’ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವಂತಹ ಕಲಾವಿದೆ. ತನ್ನ ಬದುಕನ್ನೇ ಸಂಗೀತಕ್ಕೆ ಮುಡುಪಾಗಿಟ್ಟಿದ್ದು, ಅಂತಹ ಮಹಾನ್ ಕಲಾವಿದೆಗೆ ತಾನು ಪೂಜಿಸುತ್ತಿದ್ದ ಸಂಗೀತವೇ ಮರೀಚಿಕೆಯಾದಾಗ ಅದನ್ನು ಹಿಂಪಡೆಯಲು ಆಧ್ಯ ಪಡುವ ಶ್ರಮವೇ ಬ್ರಾಹ್ಮಿಯ ಮುಖ್ಯಕಥಾವಸ್ತು.
ಇಳಾ ಎನ್ನುವ ಪಾತ್ರವನ್ನು ರಂಗಭೂಮಿ ನಟಿ ಅನೂಷಾ ಕೃಷ್ಣ ಹಾಗು ಮತ್ತೊಂದು ಮುಖ್ಯ ಪಾತ್ರದಲ್ಲಿ ಬಿ.ಜಿ. ಸತ್ಯ ಮಾಡಲಿದ್ದಾರೆ. ಈ ಚಿತ್ರಕ್ಕೆ ಬಿಂದುಮಾಲಿನಿ ಅವರ ಸಂಗೀತ ನಿರ್ದೇಶನವಿದೆ.
ಸೂಕ್ಷ್ಮ ವಿಷಯವನ್ನು ಸರಳವಾಗಿ ಮನಮುಟ್ಟುವಂತೆ ಅಂದವಾದ ಚಿತ್ರಕಥೆಯನ್ನು ಪ್ರದೀಮ್ ವರ್ಮ ಹಾಗೂ ವಿಶ್ವನಾಥ ಆರ್ ಪೆಡ್ನೇಕರ್ ಬರೆದಿದ್ದಾರೆ. ಈ ಸಿನಿಮಾಗೆ D.O.P ಆಗಿ ಗುರುಪ್ರಸಾದ್ ನರ್ನಾಡ್ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಚಿತ್ರರಂಗವೂ ವಿಶೇಷ ತಿರುವಿನಲ್ಲಿ ನಿಂತಿರುವುದು ಸತ್ಯ. ಅಂತಹ ಒಂದು ತಿರುವಿನಲ್ಲಿ ಹೊಸದೊಂದು ತಿರುವನ್ನು ಸೃಷ್ಠಿಸಲು ಬ್ರಾಹ್ಮಿ ಚಿತ್ರತಂಡ ಸಜ್ಜಾಗಿದೆ.
Discussion about this post