ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಚಲಿಸುತ್ತಿದ್ದ ರೈಲಿನಿಂದ ಬಿದ್ದ ವೃದ್ಧರೊಬ್ಬರನ್ನು ಕ್ಷಣಾರ್ಧದಲ್ಲಿ ರೈಲ್ವೆ ಭದ್ರತಾ #RailwayProtectionForce ಪಡೆಯ ಸಿಬ್ಬಂದಿ ರಕ್ಷಿಸಿದ ಘಟನೆ ನಿನ್ನೆ ಬೆಳಗಾವಿ #Belagavi ರೈಲು ನಿಲ್ದಾಣದಲ್ಲಿ ನಡೆದಿದೆ.
ಜಿಲ್ಲೆಯ ಉಚ್ಚಗಾಂವ ಸಮೀಪದ ಬಸುರತೆ ಗ್ರಾಮದ ನಿವಾಸಿಯಾದ ಬರಮಾ ಗಂಗರಾಮ ಕುಂಬಾರ (55) ಎಂಬುವರು ಬೆಳಗಾವಿಯಿಂದ ಪುಣೆಗೆ ತೆರಳುವ ತಮ್ಮ ಮೊಮ್ಮಗನಾದ ಶ್ರೀ ಲಕ್ಷ್ಮಿ ರಾಜಾರಾಮ ಕುಂಬಾರ ಅವರನ್ನು #Mysore ಮೈಸೂರು-ಅಜ್ಮೀರ್ ಎಕ್ಸ್’ಪ್ರೆಸ್ ರೈಲಿಗೆ ( ಸಂಖ್ಯೆ16210) ಬೀಳ್ಕೊಡಲು ಬಂದಿದ್ದರು.
ಇದನ್ನು ಕರ್ತವ್ಯ ನಿರತ ಆರ್’ಪಿಎಫ್ ಹೆಡ್ ಕಾನ್ಸ್ಟೇಬಲ್ ಸಿ.ಐ. ಕೊಪ್ಪದ ಗಮನಿಸಿ ತಕ್ಷಣ, ಧೈರ್ಯದಿಂದ ಮುನ್ನುಗಿ ಸಿಲುಕುತ್ತಿದ್ದ ವಯಸ್ಕರನ್ನು ರಕ್ಷಿಸಿದರು. ನಂತರ ಅವರನ್ನು ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಹೆಡ್ ಕಾನ್ಸ್ಟೇಬಲ್ ಸಿ.ಐ. ಕೊಪ್ಪದ ಅವರ ಜಾಗರೂಕತೆ ಹಾಗೂ ಕರ್ತವ್ಯ ನಿಷ್ಠೆಯಿಂದ ಅನಾಹುತ ತಪ್ಪಿದೆ. ಇವರ ಈ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೊಪ್ಪದ ಅವರು ಸದ್ಯ ಬೆಳಗಾವಿ ಆರ್’ಪಿಎಫ್ ಪೋಸ್ಟ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post