ಕಲ್ಪ ಮೀಡಿಯಾ ಹೌಸ್ | ಬ್ರೆಜಿಲ್ |
ಪ್ರೇಯಸಿ ಕೈಕೊಟ್ಟಳು ಎಂಬ ಕಾರಣದಿಂದ ಸಿಟ್ಟಿಗೆದ್ದ ಯುವಕನೊಬ್ಬ ಆಕೆಯ ಮುಖದ ಮೇಲೆ ತನ್ನ ಹೆಸರನ್ನು ಪರ್ಮನೆಂಟ್ ಟ್ಯಾಟೋ ಹಾಕಿರುವ ವಿಚಿತ್ರ ಘಟನೆ ಬ್ರೆಜಿಲ್’ನಲ್ಲಿ ನಡೆದಿದೆ.
ಇಲ್ಲಿನ, ಸಾವೋ ಪಾಲೋ ರಾಜ್ಯದ 18 ವರ್ಷದ ತಯಾನೆ ಕಾಲ್ಡಾಸ್ ಎಂಬ ಯುವತಿ ಶಾಲೆಗೆ ಹೋಗುತ್ತಿದ್ದಳು. ಆಕೆಯ ಮಾಜಿ ಗೆಳೆಯ ಗೇಬ್ರಿಯಲ್ ಕೊಯೆಲ್ಹೋ ಎಂಬಾತ ಆಕೆಯನ್ನು ತನ್ನ ಕಾರಿಗೆ ಹತ್ತುವಂತೆ ಒತ್ತಾಯಿಸಿದ್ದಾನೆ. ಒಂದು ವೇಳೆ ಕಾರಿಗೆ ಹತ್ತದಿದ್ದರೆ ಹಲ್ಲೆ ನಡೆಸುವೆ ಎಂದು ಆತ ಹೆದರಿಸಿದ್ದರಿಂದ ಯುವತಿ ಕಾರು ಹತ್ತಿದ್ದಾಳೆ. ನಂತರ ಆತ ಆಕೆಯನ್ನು ತೌಬಟೆ ಪುರಸಭೆಯಲ್ಲಿರುವ ತನ್ನ ಮನೆಗೆ ಕರೆದೊಯ್ದು, ಯುವತಿಯ ಬಲಭಾಗದ ಕಿವಿಯಿಂದ ಗಲ್ಲದವರೆಗೂ ಕೆನ್ನೆಯ ಮೇಲೆ ತನ್ನ ಹೆಸರನ್ನು ಪರ್ಮನೆಂಟ್ ಟ್ಯಾಟೋ ಹಾಕಿದ್ದಾನೆ.
ತನ್ನ ಮಗಳು ಕಾಣೆಯಾಗಿರುವ ಕುರಿತಾಗಿ ಯುವತಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಆಕೆಯನ್ನು ಪತ್ತೆ ಮಾಡಿ, ಯುವಕನನ್ನು ಬಂಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post