ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶದ ಜನತೆಗೆ ಬಿಗ್ ಸರ್ಪೈಸ್ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಎಚ್’ಎಎಲ್ #HAL ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ #Tejas_fighter_jet ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಇಂದು ಪ್ರಧಾನಿ ಮೋದಿಯವರು #PMNarendraModi ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಕೆಲ ಕಾಲ ಬೆಂಗಳೂರಿನ ಎಚ್’ಎಎಲ್ ವಾಯುನೆಲೆಗೆ ಭೇಟಿ ನೀಡಿ ಆನಂತರ ತೆಲಂಗಾಣಕ್ಕೆ #Telanagana ತೆರಳುತ್ತಾರೆ ಎಂಬ ಮಾಹಿತಿ ಮಾತ್ರ ಪ್ರಕಟಗೊಂಡಿತ್ತು. ಆದರೆ, ಯಾತಕ್ಕಗಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ.
ಆದರೆ, ಈಗ್ಗೆ ಕೆಲವು ನಿಮಿಷಗಳ ಹಿಂದೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತೇಜಸ್ ಯುದ್ಧ ವಿಮಾನದಲ್ಲಿ ಯಶಸ್ವಿ ಹಾರಾಟ ನಡೆಸಿರುವ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿಯವರು, ತೇಜಸ್’ನಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ವಿಸ್ಮಯಕಾರಿಯಾಗಿ ಪುಷ್ಟೀಕರಿಸಿದೆ. ನಮ್ಮ ದೇಶದ ಸ್ಥಳೀಯ ಸಾಮರ್ಥ್ಯಗಳಲ್ಲಿ ನನ್ನ ವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸಿತು ಮತ್ತು ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ನನಗೆ ಹೊಸ ಹೆಮ್ಮೆ ಮತ್ತು ಆಶಾವಾದವನ್ನು ನೀಡಿದೆ ಎಂದಿದ್ದಾರೆ.
ತೇಜಸ್’ನಂತಹ ಯುದ್ದ ವಿಮಾನದಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿ ಹಾರಾಟ ನಡೆಸಿರುವುದು ವಿಶ್ವದ ಗಮನ ಸೆಳೆದಿದೆ.
ತೇಜಸ್’ನಲ್ಲಿ ಪ್ರಧಾನಿ ಮೋದಿ | ಫೋಟೋಗಳನ್ನು ನೋಡಿ ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post