ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಮುನ್ನಡೆಯುತ್ತಿದ್ದು, ಈವರೆಗೂ 335ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಮುನ್ನುಗ್ಗುತ್ತಿದೆ.
ಆದರೆ, ಬಿಜೆಪಿಯನ್ನು ಸೋಲಿಸಿ, ಮೋದಿ ಪ್ರಧಾನಿಯಾಗುವುದನ್ನು ಶತಾಯಗತಾಯ ತಡೆಯಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದ ಕಾಂಗ್ರೆಸ್ 22 ರಾಜ್ಯಗಳಲ್ಲಿ 11.30ರವರೆಗೂ ಖಾತೆಯನ್ನೇ ತೆರೆಯದೇ ಭಾರೀ ಮುಖಭಂಗ ಅನುಭವಿಸಿದೆ.
ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಉಮೇದಿನಲ್ಲದ್ದರೆ, ಹೀನಾಯವಾಗಿ ಸೋಲುವ ಆತಂಕದಲ್ಲಿರುವ ಕಾಂಗ್ರೆಸ್, ಈ ಬಾರಿಯೂ ಸಹ ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆದುಕೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
Discussion about this post