ಕಲ್ಪ ಮೀಡಿಯಾ ಹೌಸ್ | ಅಹಮದಾಬಾದ್ |
ಶತಾಯುಷಿ ಹೀರಾಬೆನ್ ಮೋದಿಯವರು ಇಂದು ವಿಧಿವಶರಾಗಿದ್ದು, ತಾಯಿಯನ್ನು ಕಳೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಆಕೆಯನ್ನು ನೆನೆದು ಭಾವುಕ ಪೋಸ್ಟ್ ಹಾಕಿದ್ದಾರೆ.
ತಮ್ಮ ತಾಯಿಯ ನಿಧನದ ಹಿನ್ನೆಲೆಯಲ್ಲಿ ಭಾವುಕರಾಗಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿಯವರು, ನಮ್ಮ ತಾಯಿಯ ಜೀವನದ ಮೂರು ಹಂತ ಕಂಡಿದ್ದೇನೆ. ತಪಸ್ವೀ ಬದುಕು, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ. ನಿಸ್ವಾರ್ಥತೆ ಪ್ರತೀಕ, ಮೌಲ್ಯಾಧಾರಿತ ಬದ್ಧತೆ ಎಂದು ಕಂಬನಿ ಮಿಡಿದಿದ್ದಾರೆ.
शानदार शताब्दी का ईश्वर चरणों में विराम… मां में मैंने हमेशा उस त्रिमूर्ति की अनुभूति की है, जिसमें एक तपस्वी की यात्रा, निष्काम कर्मयोगी का प्रतीक और मूल्यों के प्रति प्रतिबद्ध जीवन समाहित रहा है। pic.twitter.com/yE5xwRogJi
— Narendra Modi (@narendramodi) December 30, 2022
ಶಾನ್ ದಾರ್ ಶತಾಬ್ದಿ ಕಾ ಈಶ್ವರ್ ಚರಣೋ ಮೇ ವಿರಾಮ್.. ತಾಯಿಯಲ್ಲಿ ಯಾವಾಗಲೂ ತ್ರಿಮೂರ್ತಿಗಳನ್ನು ನಾನು ಕಂಡಿದ್ದೇನೆ. ಅವರ ಬದುಕು ತಪೋ ಸದೃಶ, ನಿಸ್ವಾರ್ಥ ಕರ್ಮಯೋಗಿಯ ಬಾಳ್ವೆ. ಮೌಲ್ಯಗಳಿಗೆ ಬದ್ಧವಾಗಿದ್ದ ತುಂಬು ಜೀವನ.. ಅವರಿಗೆ 100 ವರ್ಷ ಪೂರ್ಣವಾದಾಗ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದೆ. ಆಗ ಅವರು ನೀಡಿದ ಹಿತ ವಚನ ನೆನಪಾಗುತ್ತಿದೆ. ಯಾವಾಗಲೂ ಬುದ್ಧಿವಂತಿಕೆಯಿAದ ಕೆಲಸಗಳನ್ನು ಮಾಡಿ, ಪರಿಶುದ್ಧತೆಯಿಂದ ಬದುಕಿರಿ ಎಂದು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post