ನವದೆಹಲಿ: ಬಾಲಾಕೋಟ್’ನ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಂತರದ ಬೆಳವಣಿಗೆಯ ವೇಳೆ ಪಾಕ್ ಸೇನೆಗೆ ಬಂಧಿಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಸುಮಾರು 40 ಗಂಟೆಗಳ ಕಾಲ ಪಾಪಿ ಐಎಸ್’ಐ ಚಿತ್ರಹಿಂಸೆ ನೀಡಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಈ ಸ್ಫೋಟಕ ಮಾಹಿತಿಯನ್ನು ಸ್ವತಃ ಅಭಿನಂದನ್ ಅವರೇ ವಿಚಾರಣೆಯ ವೇಳೆ ಹೊರಹಾಕಿದ್ದಾರೆ ಎಂದು ಹೇಳಲಾಗಿದ್ದು, ಈ ಕುರಿತು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಅಭಿನಂದನ್ ಸೆರೆಯಾದ ತತಕ್ಷಣ ಅವರನ್ನು ಪಾಕಿಸ್ಥಾನ ಗುಪ್ತಚರ ಇಲಾಖೆ ಐಎಸ್‘ಐಗೆ ಅಲ್ಲಿನ ಸೇನೆ ಹಸ್ತಾಂತರ ಮಾಡಿತ್ತು. ಈ ವೇಳೆ ಎರಡು ದಿನಗಳ ಕಾಲ ತನಿಖಾ ಸೆಲ್’ನಲ್ಲಿ ಇರಿಸಿ 40 ಗಂಟೆಗಳವರೆಗೆ ಚಿತ್ರಹಿಂಸೆ ನೀಡಿದೆ ಎಂದು ವರದಿಯಾಗಿದೆ.
ವಿಚಾರಣೆ ವೇಳೆ ಅಭಿನಂದನ್’ಗೆ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದ್ದು, ಅವರನ್ನು ಇರಿಸಲಾಗಿದ್ದ ಕೊಠಡಿಯಲ್ಲಿ ಮಿತಿ ಮೀರಿದ ಪ್ರಖರ ಬೆಳಕು ಹಾಗೂ ಶಬ್ದವನ್ನು ಹಾಕಲಾಗಿತ್ತು. ಅಲ್ಲದೇ, ನಿರಂತರವಾಗಿ ಅಲ್ಲಿನ ವ್ಯಕ್ತಿಗಳು ಅಭಿನಂದನ್’ಗೆ ಹೊಡೆಯುತ್ತಿದ್ದರು ಎಂದು ಸ್ವತಃ ಅಭಿನಂದನ್ ವಿಚಾರಣೆ ವೇಳೆ ಹೇಳಲಾಗಿದೆ.
Discussion about this post