ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಸಕ್ತ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಮೊದಲ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಗಳಿಸಿದೆ.
ರಾಜ್ಯ ಶಾಲ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಶೇ.94ರಷ್ಟು ಫಲಿತಾಂಶದ ಮೂಲಕ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಶೇ.92.12ರಷ್ಟು ಫಲಿತಾಂಶ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಗಳಿಸಿದೆ.

ಕೊಡಗು 4, ಉತ್ತರ ಕನ್ನಡ 5, ಹಾಸನ 6, ಮೈಸೂರು 7, ಶಿರಸಿ ಶೈಕ್ಷಣಿಕ ಜಿಲ್ಲೆ 8, ಬೆಂಗಳೂರು ಗ್ರಾಮಾಂತರ 9 ಹಾಗೂ ಚಿಕ್ಕಮಗಳೂರು ಜಿಲ್ಲೆ 10ನೇ ಸ್ಥಾನ ಗಳಿಸಿದೆ.
Also read: ಈ ಕಾರಣದಿಂದಲೇ ಕಾಂಗ್ರೆಸ್ ಗೆಲುವು ಸಾಧಿಸಲಿದೆ: ಸಚಿವ ಮಧು ಬಂಗಾರಪ್ಪ
ಹೀಗಿದೆ ಫಲಿತಾಂಶದ ಹೈಲೈಟ್ಸ್:
- 2023-24ನೇ ಸಾಲಿನಲ್ಲಿ 287416 ವಿದ್ಯಾರ್ಥಿಗಳು ಉತ್ತೀರ್ಣ
- 343788 ವಿದ್ಯಾರ್ಥಿನಿಯರು ಪಾಸ್
- 436138 ವಿದ್ಯಾರ್ಥಿಗಳು ಪಾಸ್
ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಪರೀಕ್ಷೆ ನಡೆದಿತ್ತು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು 8.69 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.
ರಾಜ್ಯಾದ್ಯಂತ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ ವತಿಯಿಂದ ಮಾರ್ಚ್ 25 ಮತ್ತು ಏಪ್ರಿಲ್ 6ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಫಲಿತಾಂಶ ಹೊರ ಬಿದ್ದಿದೆ. ಈ ಪೈಕಿ ಬಾಗಲೋಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್. 625ಕ್ಕೆ 625 ಅಂಕ ಪಡೆದುಕೊಂಡಿದ್ದಾಳೆ.
ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ಮತ್ತು kseab.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ವಿವರ
- ಅಂಕಿತಾ ಬಸಪ್ಪ ಕೊನ್ನೂರು (625/625) (ರಾಜ್ಯಕ್ಕೆ ಫ್ರಥಮ)
- ದ್ವೀತಿಯ ಸ್ಥಾನ 7 ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದೆ:
- ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
- ಹರ್ಷಿತಾ ಡಿಎಂ (ಮಧುಗಿರಿ)
- ಚಿನ್ಮಯ್ (ದಕ್ಷಿಣ ಕನ್ನಡ)
- ಸಿದ್ದಾಂತ್ (ಚಿಕ್ಕೊಡಿ )
- ದರ್ಶನ್ (ಶಿರಸಿ)
- ಚಿನ್ಮಯ್ (ಶಿರಸಿ)
- ಶ್ರೀರಾಮ್ (ಶಿರಸಿ)
ಲಿಂಗವಾರು ಒಟ್ಟಾರೆ ಫಲಿತಾಂಶ
- ಬಾಲಕರು: 2,87,416 (65.90%)
- ಬಾಲಕಿಯರು; 3,43,788 (81.11%)
- SSLC ಪರೀಕ್ಷೆಯಲ್ಲಿ ಬಾಲಕಿಯರ ಮೇಲುಗೈ ಸಾಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post