ಲಕ್ನೋ: 2009ರ ಲೋಕಸಭಾ ಚುನಾವಣೆಯಲ್ಲಿ ಇಡಿಯ ವಿಶ್ವವೇ ತಿರುಗಿ ನೋಡುವಂತೆ ಅಭೂತಪೂರ್ವ ಜಯ ದಾಖಲಿಸಿದ ಪ್ರಧಾನಿ ನರೇಂದ್ರ ಮೋದಿಯವರು ಸಾಧನೆ ಮುಗಿಲೆತ್ತರಕ್ಕೆ ಹಾರಿದೆ. ಪರಿಣಾಮ ಎಲ್ಲೆಲ್ಲೂ ಈಗ ಮೋದಿಯದ್ದೇ ಹವಾ…
ಇಂತಹ ಸಂಭ್ರಮದಲ್ಲೇ ಮುಳುಗಿರುವ ಉತ್ತರಪ್ರದೇಶದ ಮುಸ್ಲಿಂ ಕುಟುಂಬವೊಂದು ತಮ್ಮ ನವಜಾತ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡಿರುವ ಶಿಶುವಿನ ತಾಯಿ ಮಿನಾಜ್ ಬೇಗಂ, ನನ್ನ ಮಗು ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಆಗಬೇಕು, ಅವರ ಆದರ್ಶಗಳನ್ನೇ ಪಾಲಿಸುವಂತಾಗಬೇಕು ಎಂದಿದ್ದಾರೆ.
Gonda: Family names their newborn son 'Narendra Modi'. Menaj Begum, mother says, "My son was born on 23 May, I called my husband who is in Dubai&he asked 'Has Narendra Modi won?' so I named my son Narendra Modi. I want my son to do good work like Modi ji&be as successful as him." pic.twitter.com/ywadXyiBLc
— ANI UP (@ANINewsUP) May 25, 2019
ಮೇ 23ರಂದು ಲೋಕಸಭಾ ಚುನಾವಣೆಯ ದಿನ ನನಗೆ ಮಗು ಜನಿಸಿತು. ಇದನ್ನು ತಿಳಿಸಲು ದುಬೈನಲ್ಲಿರುವ ನನ್ನ ಪತಿಗೆ ಕರೆ ಮಾಡಿದೆ. ಆಗ ಅವರು ಕೇಳಿದ ಮೊದಲ ಪ್ರಶ್ನೆ: ನರೇಂದ್ರ ಮೋದಿ ಗೆದ್ದರಾ? ಹೌದು ಎಂದೆ… ತತಕ್ಷಣವೇ ನನ್ನ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟೆವು. ಮೋದಿ ಜಿ ಅವರಂತೆಯೇ ನನ್ನ ಮಗುವೂ ಸಹ ಒಳ್ಳೆಯ ಕೆಲಸ ಮಾಡಬೇಕು. ಅವರಂತೆಯೇ ಯಶಸ್ವಿ ವ್ಯಕ್ತಿಯಾಗಬೇಕು ಎಂದು ಬಯಸುತ್ತೇನೆ. ಹೀಗಾಗಿ, ಅವರ ಮೇಲಿನ ಅಭಿಮಾನದಿಂದ ಅವರ ಹೆಸರನ್ನೇ ಇಟ್ಟಿದ್ದೇವೆ ಎನ್ನುತ್ತಾರೆ.
ನರೇಂದ್ರ ಮೋದಿಯವರ ಆಡಳಿತ ಅತ್ಯುತ್ತಮವಾಗಿದ್ದು, ದೇಶದ ಸುಭದ್ರತೆಗೆ ಪೂರಕವಾಗಿದೆ. ಮುಂದಿನ ಅವಧಿಯಲ್ಲೂ ಸಹ ಜನೋಪಕಾರಿ ಯೋಜನೆಗಳು ಜಾರಿಯಾಗಿ, ನಮ್ಮಂತವರಿಗೆ ಸಹಕಾರಿಯಾಗುತ್ತದೆ ಎಂಬ ಭರವಸೆಯಿದೆ ಎನ್ನುತ್ತಾರೆ ಮಿನಾಜ್ ಬೇಗಂ.
Discussion about this post