ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #NarendraModi ಅವರು ಭೇಟಿ ನಿಗದಿಗೊಂಡಿರುವ ರಾಜಸ್ಥಾನದ ದೌಸಾ ಜಿಲ್ಲೆಯ ಪ್ರದೇಶದಲ್ಲಿ ಬರೋಬ್ಬರಿ 1 ಸಾವಿರ ಕೆಜಿ ಭಾರೀ ಸ್ಪೋಟಕಗಳು #explosives ಪತ್ತೆಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ದೌಸಾ ಜಿಲ್ಲೆಗೆ ಫೆ.12ರಂದು ಪ್ರಧಾನಿಯವರು ಭೇಟಿ ನೀಡುವುದು ನಿಗದಿಯಾಗಿದೆ. ಪ್ರಧಾನಿಯವರ ಕಾರ್ಯಕ್ರಮ ನಿಗದಿಯಾಗಿರುವ ಸ್ಥಳದ ಸನಿಹದಲ್ಲೇ ಇರುವ ಖಾನ್ ಭಂಕಾರಿ ರಸ್ತೆಯಲ್ಲಿ ಈ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಓರ್ವನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.
ಮಾಹಿತಿಯಂತೆ 65 ಡಿಟೋನೇರ‍್ಸ್ #detonators 360 ಜಿಲೆಟಿನ್ ಕಡ್ಡಿಗಳನ್ನು #gelatin_stick ಹೊಂದಿರುವ 40 ಬಾಕ್ಸ್ ಸೇರಿ ಬರೋಬ್ಬರಿ 1000 ಕೆಜಿ ಸ್ಪೋಟಕಗಳನ್ನು ಸೀಜ್ ಮಾಡಲಾಗಿದೆ. ಒಂದು ಜಿಲೆಟಿನ್ ಕಡ್ಡಿ 2.78 ಕೆಜಿ ತೂಕ ಹೊಂದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ
ವ್ಯಾಸ ಮೊಹಲ್ಲಾ ಮೂಲದ ರಾಜೇಶ್ ಮೀನಾ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಈತ ಸ್ಫೋಟಕ ಸಾಗಿಸುತ್ತಿದ್ದ ವಾಹನವನ್ನೂ ಸಹ ವಶಕ್ಕೆ ಪಡೆಯಲಾಗಿದೆ.
ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆಧರಿಸಿ ತಪಾಸಣೆಯನ್ನು ಬಿಗಿಗೊಳಿಸಿದ ಪೊಲೀಸರು ಈ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಸ್ಪೋಟಕ ಸಾಮಗ್ರಿಗಳನ್ನು ಸಾಗಿಸಲು ಯಾವುದೇ ರೀತಿಯ ಪರವಾಗಿಯನ್ನು ಹೊಂದಿರಲಿಲ್ಲ. ಅಲ್ಲದೇ, ಈ ಕುರಿತ ಪೊಲೀಸರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಆತ ವಿಫಲವಾಗಿದ್ದಾನೆ ಎಂದು ವರದಿಯಾಗಿದೆ.
ದೆಹಲಿ-ಮುಂಬೈ ಎಕ್ಸ್’ಪ್ರೆಸ್ ರಸ್ತೆಯ ದೌಸಾ-ಸೋಹ್ನಾ ವಿಸ್ತರಣೆ ರಸ್ತೆಯನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post