ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2023ರಲ್ಲಿ ಕೇಂದ್ರ ಲೋಕಸೇವಾ ಆಯೋಗ #UPSC ನಡೆಸಿದ್ದ ನಾಗರೀಕ ಸೇವಾ ಪರೀಕ್ಷೆಯ #CSE ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಪ್ರದೇಶ ಮೂಲದ ಆದಿತ್ಯ ಶ್ರೀವಾಸ್ತವ್ #AdityaSrivastava ಮೊದಲ ರ‍್ಯಾಂಕ್ ಗಳಿಸುವ ಮೂಲಕ ಟಾಪರ್ #Topper ಆಗಿ ಹೊರಹೊಮ್ಮಿದ್ದಾರೆ.
2023 ರ ಸಿವಿಲ್ ಸರ್ವೀಸ್ ಪರೀಕ್ಷೆಯ (ಸಿಎಸ್’ಇ) ಅಂತಿಮ ಫಲಿತಾಂಶಗಳನ್ನು ಯುಪಿಎಸ್’ಸಿ ಪ್ರಕಟಿಸಿದ್ದು, ಆದಿತ್ಯ ಶ್ರೀವಾಸ್ತವ ಅವರು ಅಖಿಲ ಭಾರತೀಯ ಮೊದಲನೇ ರ‍್ಯಾಂಕ್, ಅನಿಮೇಶ್ ಪ್ರಧಾನ್ 2ನೇ ರ‍್ಯಾಂಕ್ ಹಾಗೂ ಡೊನೂರು ಅನನ್ಯಾ ರೆಡ್ಡಿ 3ನೇ ರ‍್ಯಾಂಕ್ ಗಳಿಸಿದ್ದಾರೆ.

ಯುಪಿಎಸ್’ಸಿ ಒಟ್ಟು 1143 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಇದಲ್ಲದೆ, ಶಿಫಾರಸು ಮಾಡಲಾದ 355 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಾತ್ಕಾಲಿಕವಾಗಿ ಇರಿಸಲಾಗಿದೆ ಎಂದು ಆಯೋಗವು ತನ್ನ ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.
ಇವರೇ ಟಾಪ್ 10 ಅಭ್ಯರ್ಥಿಗಳು:
1ನೇ ರ‍್ಯಾಂಕ್ – ಆದಿತ್ಯ ಶ್ರೀವಾಸ್ತವ
2ನೇ ರ‍್ಯಾಂಕ್ – ಅನಿಮೇಶ್ ಪ್ರಧಾನ್
3ನೇ ರ‍್ಯಾಂಕ್ – ಡೋಣೂರು ಅನನ್ಯಾ ರೆಡ್ಡಿ
4ನೇ ರ‍್ಯಾಂಕ್ – ಪಿ ಕೆ ಸಿದ್ಧಾರ್ಥ್ ರಾಮಕುಮಾರ್
5ನೇ ರ‍್ಯಾಂಕ್ – ರುಹಾನಿ
6ನೇ ರ‍್ಯಾಂಕ್- ಸೃಷ್ಟಿ ದಾಬಾಸ್
7ನೇ ರ‍್ಯಾಂಕ್ – ಅನ್ಮೋಲ್ ರಾಥೋರ್
8 ನೇ ರ‍್ಯಾಂಕ್ – ಆಶಿಶ್ ಕುಮಾರ್
9 ನೇ ರ‍್ಯಾಂಕ್ – ನೌಶೀನ್
10 ನೇ ರ‍್ಯಾಂಕ್- ಐಶ್ವರ್ಯಂ ಪ್ರಜಾಪತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post