ಕಲ್ಪ ಮೀಡಿಯಾ ಹೌಸ್ | ಶ್ರೀಹರಿಕೋಟಾ |
ಭಾರತದ ಇಸ್ರೋ #ISRO ಸಂಸ್ಥೆಯ ಮಹತ್ವಾಕಾಂಕ್ಷೆ ಚಂದ್ರಯಾನ-3 #Chandrayana3 ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 2.36ಕ್ಕೆ ಆಂಧ್ರಪ್ರದೇಶದ #Andrapradesh ಶ್ರೀಹರಿಕೋಟಾದಲ್ಲಿರುವ #Sriharikota ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು.
#WATCH | Indian Space Research Organisation (ISRO) launches #Chandrayaan-3 Moon mission from Satish Dhawan Space Centre in Sriharikota.
Chandrayaan-3 is equipped with a lander, a rover and a propulsion module. pic.twitter.com/KwqzTLglnK
— ANI (@ANI) July 14, 2023
ಈ ಐತಿಹಾಸಿಕ ಕ್ಷಣವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ಇಂದಿನಿಂದ ಆರು ವಾರಗಳ ಕಾಲ ಇಸ್ರೋದ ಮಹತ್ವದ ಕಾರ್ಯಾಚರಣೆ ಆರಂಭವಾಗಲಿದೆ.
ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾದ ಕ್ಷಣ ಉಪಸ್ಥಿತರಿದ್ದ ವಿಜ್ಞಾನಿಗಳು ಚಪ್ಪಾಳ ತಟ್ಟಿ ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್, ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ ಚಂದ್ರಯಾನ 3 ತಂಡದ ಎಲ್ಲ ಸದಸ್ಯರು ಇದ್ದರು.
#WATCH | Indian Space Research Organisation (ISRO) launches #Chandrayaan-3 Moon mission from Satish Dhawan Space Centre in Sriharikota.
Chandrayaan-3 is equipped with a lander, a rover and a propulsion module. pic.twitter.com/KwqzTLglnK
— ANI (@ANI) July 14, 2023
ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ. ಚಂದ್ರಯಾನ-3 ಉಪಗ್ರಹವನ್ನು ಎಲ್ ವಿಎಂ3 ರಾಕೆಟ್ ಇಂದು ಮಧ್ಯಾಹ್ನ 2.35ಕ್ಕೆ ಹೊತ್ತೊಯ್ಯಲಿದೆ. ಅದಕ್ಕೆ ಅಂತಿಮ ಕ್ಷಣದ ಪೂರ್ವಸಿದ್ಧತೆಗಳು ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

ಇಂದು ಉಡಾವಣೆಯಾಗಲಿರುವ ಉಪಗ್ರಹ ಇಳಿಯಲು ಗೊತ್ತುಪಡಿಸಿದ ಲ್ಯಾಂಡಿಂಗ್ ಕೇಂದ್ರ ಚಂದ್ರನ ದಕ್ಷಿಣ ಧ್ರುವವಾಗಿದೆ, ಚಂದ್ರನ #Moon ಮೇಲ್ಮೈ ಮೇಲೆ ಆಗಸ್ಟ್ 23 ಅಥವಾ 24 ರ ಸುಮಾರಿಗೆ ಲ್ಯಾಂಡಿಂಗ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು 14 ಭೂಮಿಯ ದಿನಗಳಿಗೆ ಸಮನಾಗಿರುತ್ತದೆ, ಚಂದ್ರಯಾನ-3 ಚಂದ್ರನ ಪರಿಶೋಧನೆಗೆ ಸಿದ್ಧವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post