ಲಕ್ನೋ: ನವದೆಹಲಿಗೆ ಹೊರಟಿದ್ದ ಡಬಲ್ ಡೆಕ್ಕರ್ ಬಸ್’ವೊಂದು ಯಮುನಾ ಎಕ್ಸ್’ಪ್ರೆಸ್ ವೇನಲ್ಲಿರುವ ಚಾನಲ್’ಗೆ ಉರುಳಿಬಿದ್ದಿದ್ದು, ಸುಮಾರು 29 ಮಂದಿ ಸಾವಿಗೀಡಾದ ದುರ್ಘಟನೆ ನಡೆದಿದೆ.
ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ಅಪಘಾತಕ್ಕೀಡಾದ ಬಸ್ ಲಕ್ನೋದಿಂದ ನವದೆಹಲಿಗೆ ಹೊರಟಿತ್ತು. ಆಗ್ರಾ ಬಳಿ ಚಲಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಯಮುನಾ ಎಕ್ಸ್’ಪ್ರೆಸ್ ವೇನಲ್ಲಿರುವ ಚಾನಲ್’ಗೆ ಉರುಳಿಬಿದ್ದಿದೆ. ಬಸ್’ನಲ್ಲಿ ಸುಮಾರು 50 ಪ್ರಯಾಣಿಕರಿದ್ದರು ಎನ್ನಲಾಗಿದೆ.
ಸುಮಾರು 29 ಮಂದಿ ಮೃತರಾಗಿದ್ದು, ನೀರಿನಲ್ಲಿ ಮುಳುಗಿರುವ ಬಸ್’ನಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಘಟನೆ ನಡೆದ ತತಕ್ಷಣವೇ ಸ್ಥಳೀಯರು ರಕ್ಷಣೆಗೆ ಧಾವಿಸಿದ ಹಿನ್ನೆಲೆಯಲ್ಲಿ ಹಲವು ಮಂದಿಯನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.
Discussion about this post