ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಭಾಗದಲ್ಲಿ ಇಂದು ನಸುಕಿನಲ್ಲಿ ಭೂಕಂಪನ ಅನುಭವವಾಗಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಕ್ಕೆ ಓಡಿಬಂದಿದ್ದಾರೆ.
ಇAದು ನಸುಕಿನ 3.55ರ ವೇಳೆಗೆ ಶಿರಾಳಕೊಪ್ಪದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗಾಬರಿಗೊಂಡ ಜನರು ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಇನ್ನು, ಭೂಕಂಪನ ಸಂಭವಿಸಿದೆ ಎಂಬ ಮೊಬೈಲ್ ಸ್ಕಿöçÃನ್ ಶಾಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಇನ್ನೂ ದೃಢಗೊಂಡಿಲ್ಲ.
ಅಲ್ಲದೇ, ಭೂಕಂಪನದ ಕುರಿತಾಗಿ ಜಿಲ್ಲಾಧಿಕಾರಿಗಳಾಗಲೀ, ತಹಶೀಲ್ದಾರ್ ಅವರಾಗಲೀ ಮಾಧ್ಯಮಗಳಿಗೆ ದೃಢಪಡಿಸಿಲ್ಲ.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post