ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಿದೇಶಿ ವಿನಿಮಯ #ForeignExchange ಕಾನೂನು ಉಲ್ಲಂಘಿಸಿ ಕೋಟಿಗಟ್ಟಲೆ ಹಣ ಬಾಹ್ಯ ರವಾನೆ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೇಶದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ವೇಳೆ ವಾಷಿಂಗ್ ಮಷೀನ್ #WashingMachine ಒಳಗೆ ಅಡಗಿಸಿ ಇರಿಸಲಾಗಿದ್ದ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಹೌದು… ವಾಷಿಂಗ್ ಮಷೀನ್ ಒಳಗೆ ಅಡಗಿಸಿ ಇರಿಸಲಾಗಿದ್ದ 2.54 ಕೋಟಿ ರೂ. ಹಣವನ್ನು ಇಡಿ ಅಧಿಕಾರಿಗಳು #EDOfficials ಪತ್ತೆ ಮಾಡಿದ್ದು, ಎಲ್ಲಿ ಪತ್ತೆಯಾಗಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.

ವಿವಿಧ ಕಂಪನಿಗಳ ಕಚೇರಿ ಮತ್ತು ಅವುಗಳ ನಿರ್ದೇಶಕರ ಮನೆಗಳ ಮೇಲೆ ಶೋಧ ನಡೆಸಲಾಯಿತು. ಕಂಪನಿಗಳ ಪಾಲುದಾರರಾದ ವಿಜಯ್ ಕುಮಾರ್ ಶುಕ್ಲಾ, ಸಂಜಯ್ ಗೋಸ್ವಾಮಿ, ಸಂದೀಪ್ ಗಾರ್ಗ್ ಮತ್ತು ವಿನೋದ್ ಕೇಡಿಯಾ ಸೇರಿದಂತೆ ಇತರರನ್ನೂ ಸಹ ತನಿಖೆಗೆ ಒಳಪಡಿಸಲಾಗಿದೆ.

ಸಿಂಗಾಪುರದ #Singapore ಗ್ಯಾಲಕ್ಸಿ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಮತ್ತು ಹಾರಿಜಾನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್’ಗೆ 1,800 ಕೋಟಿ ಮೊತ್ತದ ಸಂಶಯಾಸ್ಪದ ಬಾಹ್ಯ ಹಣ ರವಾನೆ ಮಾಡಿದ್ದಾರೆ.
ಈ ಎರಡೂ ಸಾಗರೋತ್ತರ ಘಟಕಗಳನ್ನು ಆಂಥೋನಿ ಡಿ ಸಿಲ್ವಾ ಎಂಬ ವ್ಯಕ್ತಿ ನಿರ್ವಹಿಸುತ್ತಾರೆ. ಕಾಪ್ರಿಕಾರ್ನಿಯನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್, ಲಕ್ಷ್ಮೀಟನ್ ಮ್ಯಾರಿಟೈಮ್ ಮತ್ತು ಅವರ ಸಹವರ್ತಿಗಳು ಬೋಗಸ್ ಸರಕು ಸೇವೆಗಳು ಮತ್ತು ಆಮದುಗಳ ನೆಪದಲ್ಲಿ ಸಿಂಗಾಪುರ ಮೂಲದ ಘಟಕಗಳಿಗೆ 1,800 ಕೋಟಿಗಳಷ್ಟು ಬಾಹ್ಯ ಹಣ ರವಾನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post