ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗಿರುವ ಪಂಚ ರಾಜ್ಯಗಳ ಮತ ಎಣಿಕೆ ಆರಂಭವಾಗಿದ್ದು, ರಾಜಸ್ಥಾನ, #Rajastan ಮಧ್ಯಪ್ರದೇಶದಲ್ಲಿ #Madhyapradesh ಬಿಜೆಪಿ ಹಾಗೂ ತೆಲಂಗಾಣ #Telangana -ಛತ್ತೀಸ್’ಘಡದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಮುಂಜಾನೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದೆ.
ಬೆಳಗ್ಗೆ 8.50ರ ವೇಳೆಗೆ ರಾಜಸ್ಥಾನದಲ್ಲಿ ಬಿಜೆಪಿ #BJP 80 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ #Congress 66 ಹಾಗೂ 3 ಕಡೆಗಳಲ್ಲಿ ಪಕ್ಷೇತರರು ಮುನ್ನಡೆಯಲ್ಲಿದ್ದಾರೆ.
ಇನ್ನು, ಮಧ್ಯಪ್ರದೇಶದಲ್ಲಿ ಬಿಜೆಪಿ 100 ಸ್ಥಾನ, ಕಾಂಗ್ರೆಸ್ 81 ಹಾಗೂ 3 ಕ್ಷೇತ್ರದಲ್ಲಿ ಪಕ್ಷೇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ 54, ಬಿಎಸ್’ಆರ್ 29, ಬಿಜೆಪಿ 2, ಎಐಎಎಂಎಂ 3 ಹಾಗೂ ಪಕ್ಷೇತರರು 1 ಕ್ಷೇತ್ರದಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.
ಛತ್ತೀಸ್’ಘಡದಲ್ಲಿ ಬಿಜೆಪಿ 29, ಕಾಂಗ್ರೆಸ್ 32 ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರರು ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post