ಕಲ್ಪ ಮೀಡಿಯಾ ಹೌಸ್ | ಪಾವಗಡ |
ಇಲ್ಲಿನ ಪಳವಳ್ಳಿಕಟ್ಟೆ ಬಳಿಯಲ್ಲಿ ಖಾಸಗಿ ಬಸ್’ವೊಂದು ಪಲ್ಟಿಯಾಗಿ ಭೀಕರ ಅಪಘಾತ #Accident ಸಂಭವಿಸಿದ್ದು, 10ಕ್ಕೂ ಅಧಿಕ ಪ್ರಯಾಣಿಕರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
Also Read: ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಕಂಚಿನ ಪದಕ: ಲೋಕೇಶ್’ಗೆ ಕುವೆಂಪು ವಿವಿ ಸನ್ಮಾನ
ಇಂದು ಮುಂಜಾನೆ ಈ ಘಟನೆ ಸಂಭವಿಸಿದ್ದು, ಅಪಘಾತಕ್ಕೀಡಾದ ಬಸ್’ನಲ್ಲಿ 80ಕ್ಕೂ ಅಧಿಕ ಪ್ರಯಾಣಿಕರು ಇದ್ದರು ಇಂದು ಹೇಳಲಾಗಿದ್ದು, ಅತಿ ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಬಸ್ ಪಲ್ಟಿಯಾದ ರಭಸಕ್ಕೆ ಸ್ಥಳದಲ್ಲೇ 10 ಪ್ರಯಾಣಿಕರು ಸಾವನ್ನಪ್ಪಿದ್ದು, ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಹೆಣಗಳು ಅಪಘಾತದ ತೀವ್ರತೆಯನ್ನು ಹೇಳುತ್ತಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವೂ ಸಹ ಎದುರಾಗಿದ್ದು, 20ಮಂದಿ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಬಹಳಷ್ಟು ಮಂದಿ ಬಸ್ ಮೇಲ್ಬಾಗದಲ್ಲೂ ಸಹ ಕುಳಿತು ಪ್ರಯಾಣಿಸುತ್ತಿದ್ದುರು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
Also Read: ಸಿಗಂಧೂರಿನ ತುಮರಿಯಲ್ಲಿ ರಾಮ್ ಸೇನಾ ಮುಖಂಡನ ಮೇಲೆ ಹಲ್ಲೆ: ಪ್ರಶಾಂತ್ ಬಂಗೇರ ಆರೋಪ
ಇನ್ನು, ಘಟನೆಯಲ್ಲಿ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲಾ ಪಾವಗಡ #Pavagada ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವವರನ್ನು ತುಮಕೂರು #Tumkur ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಮೂವರನ್ನು ಉಳಿಸುವುದು ಕಷ್ಟ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೆ ಕಾರಣ?
ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬುತಗ್ಗುಗಳಲ್ಲಿ ಬಸ್ ವೇಗವಾಗಿ ಚಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತವಾದ ತತಕ್ಷಣ ಚಾಲಕ ಹಾಗೂ ನಿರ್ವಾಹಕರಿಬ್ಬರೂ ಪರಾರಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post