ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಅಧ್ಯಾತ್ಮಿಕ ಪ್ರವಚನ ಖ್ಯಾತಿಯ ಜ್ಞಾನಯೋಗಾಶ್ರಮ ಆಶ್ರಮದ ಸಿದ್ಧೇಶ್ವರ ಸ್ವಾಮಿಜಿ(81) ಇಂದು ವಿಧಿವಶರಾಗಿದ್ದಾರೆ.

ನಾಳೆ ಬೆಳಗ್ಗೆ 5 ಗಂಟೆಗೆ ಸೈನಿಕ್ ಸ್ಕೂಲ್’ನಿಂದ ಶ್ರೀಗಳ ಅಂತಿಮ ಯಾತ್ರೆ ನಡೆಯಲಿದ್ದು, ಅವರ ಇಚ್ಛೆಯಂತೆ ಆಶ್ರಮದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಮಂಗಳವಾರ ನಸುಕಿನ 5 ಗಂಟೆಯವರೆಗೂ ಆಶ್ರಮದಲ್ಲಿಯೇ ಗಣ್ಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ನಾಲ್ಕು ಗಂಟೆಗೆ ರಾಜ್ಯ ಸರ್ಕಾರದಿಂದ ಗಾರ್ಡ್ ಆಫ್ ಹಾನರ್ ನಡೆಯಲಿದ್ದು, ಆನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post