ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ #MamataBanarji ಅವರ ಹಣೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದ್ದು, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Our chairperson @MamataOfficial sustained a major injury.
Please keep her in your prayers 🙏🏻 pic.twitter.com/gqLqWm1HwE— All India Trinamool Congress (@AITCofficial) March 14, 2024
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತೃಣಮೂಲ ಕಾಂಗ್ರೆಸ್ #TMC ಪಕ್ಷದ ಅಧಿಕೃತವಾಗಿ ಫೋಟೋಗಳನ್ನು ಹಂಚಿಕೊಂಡಿದ್ದು, ಬ್ಯಾನರ್ಜಿ ಅವರ ಹಣೆಯ ಮೇಲೆ ಗಂಭೀರ ಗಾಯವಾಗಿದ್ದು, ಮುಖದ ಮೇಲೆ ರಕ್ತ ಸುರಿಯುತ್ತಿದೆ.
ಫೋಟಗಳನ್ನು ಹಂಚಿಕೊಂಡಿರುವ ಪಕ್ಷ ಘಟನೆಗೆ ಕಾರಣವೇನು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಆದರೆ, ಇಂದು ಸಂಜೆ ಮಮತಾ ಬ್ಯಾನರ್ಜಿ ಅವರ ಕಾರು ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post