ನವದೆಹಲಿ: ಭಾರತದ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನದ ಯುದ್ದ ವಿಮಾನಗಳು ಇಂದು ನಡೆಸಿದ ದಾಳಿಯ ವೇಳೆ ಪಾಕ್’ನ ಒಂದು ವಿಮಾನವನ್ನು ಹೊಡೆದುರುಳಿಸಿದ್ದೆವೆ. ಇದೇ ವೇಳೆ ನಡೆದ ಘಟನೆಯಲ್ಲಿ ನಮ್ಮ ವಿಂಗ್ ಕಮಾಂಡರ್ ಓರ್ವರು ಕಾಣೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಪಾಕಿಸ್ತಾನ ಇಂದು ಮುಂಜಾನೆ ನಮ್ಮ ವಾಯುನೆಲೆಯ ವ್ಯಾಪ್ತಿಯಲ್ಲಿ ದಾಳಿ ನಡೆಸಲು ಯತ್ನಿಸಿದ್ದ ವೇಳೆ ನಮ್ಮ ಸೇನಾ ಪಡೆಗಳು ಪ್ರತಿದಾಳಿ ನಡೆಸಿವೆ. ಇದರಲ್ಲಿ ಪಾಕಿಸ್ಥಾನದ ಎರಡು ವಿಮಾನಗಳನ್ನು ಹೊಡೆದುರುಳಿಸಿದ್ದೆವೆ. ಆದರೆ, ಈ ಘಟನೆಯಲ್ಲಿ ನಮಗೆ ಸೇರಿದ ಮಿಗ್ ವಿಮಾನವೂ ಸಹ ನಾಶವಾಗಿದ್ದು, ಓರ್ವ ಪೈಲಟ್ ಅಂದರೆ ವಿಂಗ್ ಕಮಾಂಡರ್ ಕಣ್ಮರೆಯಾಗಿದ್ದಾರೆ ಎಂದಿದ್ದಾರೆ.
ಕಣ್ಮರೆಯಾಗಿರುವ ವಿಂಗ್ ಕಮಾಂಡರ್ ತಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಆದರೆ, ಈ ವಿಚಾರದಲ್ಲಿ ನಮಗೆ ಅಧಿಕೃತವಾಗುವವರೆಗೂ ನಾವು ನಿರ್ಧಾರಕ್ಕೆ ಬರುವುದಿಲ್ಲ ಎಂದಿದ್ದಾರೆ.
Discussion about this post