ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಉಗ್ರರ ಹೆಡೆಮುರಿ ಕಟ್ಟಲು ಸಹಕಾರಿಯಾಗುವಂತೆ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ ರಿಸ್ಯಾಟ್-2ಬಿ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
🇮🇳 #ISROMissions 🇮🇳
For those who missed watching the launch live, take a look at the majestic lift-off of #PSLVC46!
Mission accomplished successfully! pic.twitter.com/Nec1XkQ7bt
— ISRO (@isro) May 22, 2019
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಪಗ್ರಹ ಉಡಾವನಾ ಕೇಂದ್ರದಿಂದ ಇಸ್ರೋ ಇಂದು ಮುಂಜಾನೆ 5.30ಕ್ಕೆ ಪಿಎಸ್‌ಎಲ್‌ವಿ-ಸಿ 46 ರಾಕೆಟ್ ಭೂ ಪರಿವೀಕ್ಷಣೆಯ ರಿಸ್ಯಾಟ್-2ಬಿ ಹೊತ್ತ ಉಡಾವಣೆಯಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.
🇮🇳 #ISROMissions 🇮🇳#PSLVC46 successfully injects #RISAT2B into Low Earth Orbit.
Here's the view of #RISAT2B separation captured by our onboard cameraOur updates will continue. pic.twitter.com/WUTBdNH2XJ
— ISRO (@isro) May 22, 2019
615 ಕೆಜಿ ತೂಕದ ರಿಸ್ಯಾಟ್ 2 ಬಿ ಉಪಗ್ರಹ ಭೂಮಿಯಿಂದ 557 ಕಿಮೀ ಎತ್ತರದ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ.
#ISROMissions#PSLVC46 lifts-off from Sriharikota.
Here's a shot of the first stage separation.
Stay tuned !!! pic.twitter.com/qJ20Zfprmr
— ISRO (@isro) May 22, 2019
ಈ ಉಪಗ್ರಹವು ಗಡಿ ಭದ್ರತೆಯ ವಿಚಾರವಾಗಿ ಉಪಗ್ರಹ ಮಹತ್ವದ ಕೆಲಸ ನಿರ್ವಹಿಸಲಿದ್ದು, ದಟ್ಟ ಮೋಡಗಳು ಕವಿದಿದ್ದರೂ ಗಡಿಯಲ್ಲಿನ ಚಿತ್ರಗಳನ್ನು ಸೇರೆ ಹಿಡಿಯುವ ಸಾಮರ್ಥ್ಯವನ್ನು ಉಪಗ್ರಹ ಹೊಂದಿದೆ. ಇದರೊಂದಿಗೆ ಕೃಷಿ, ಅರಣ್ಯ ಪ್ರದೇಶ ಸಂರಕ್ಷಣೆ ಮತ್ತು ನೈಸರ್ಗಿಕ ವಿಕೋಪ ನಿರ್ವಹಣೆಗೆ ಸಹಕಾರಿಯಾಗಲಿದೆ.
Discussion about this post