ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲಡಾಖ್: ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ, ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ಥಾನದ ಡ್ರೋಣ್ ಒಂದನ್ನು ಭಾರತೀಯ ಯೋಧರು ಧ್ವಂಸಗೊಳಿಸಿದ್ದಾರೆ.
ಇಂದು ಮುಂಜಾನೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಕಥುವಾ ಜಿಲ್ಲೆಯ ಹೀರಾನಗರ್ ತಾಲೂಕಿನ ರಥುವಾ ಗ್ರಾಮದ ಬಳಿ ಪಾಕಿಸ್ಥಾನದ ಡ್ರೋನ್ ಅನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.
ಹೀರಾನಗರದ ಸೆಕ್ಟರ್ ಬಳಿ ಪಾಕ್’ಗೆ ಸೇರಿದ ಡ್ರೋಣ್ ಹಾರುತ್ತಿರುವುದು ಬಿಎಸ್’ಎಫ್ ಗಮನಕ್ಕೆ ಬಂದಿದೆ. ತತಕ್ಷಣವೇ ಎಚ್ಚೆತ್ತ ಯೋಧರು ಗುಂಡು ಹಾರಿಸಿ ಡ್ರೋಣನ್ನು ಹೊಡೆದುರುಳಿಸಿದ್ದಾರೆ.
ಆಘಾತಕಾರಿ ವಿಚಾರವೆಂದರೆ, ಇದೇ ಸಂದರ್ಭದಲ್ಲಿ ಒಂದು ಎಂ-4 ಅಮೆರಿಕ ನಿರ್ಮಿತ ರೈಫಲ್, 2 ಮ್ಯಾಗಝೀನ್ಸ್, 60 ಸುತ್ತುಗಳ ಗುಂಡು, 7 ಗ್ರೆನೇಡ್ಸ್’ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಈ ಮೂಲಕ ಡ್ರೋಣ್ ಮೂಲಕ ಗಡಿ ಭಾಗದಲ್ಲಿ ದಾಳಿ ನಡೆಸುವ ಐಎಸ್’ಐನ ಸಂಚು ಬಯಲಾಗಿದ್ದು, ಇದೇ ವೇಳೆ ಸಂಭವನೀಯ ಭಾರೀ ಅನಾಹುತವನ್ನು ನಮ್ಮ ಹೆಮ್ಮೆಯ ಯೋಧರು ತಪ್ಪಿಸಿದ್ದಾರೆ.
Get In Touch With Us info@kalpa.news Whatsapp: 9481252093







Discussion about this post