ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಉತ್ತಮ ಭಾರತವನ್ನು ಕಟ್ಟಬೇಕಾದರೆ ಸ್ವಸ್ಥ ಹಾಗೂ ನಿರ್ಭಯ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಭಾರತೀಯ ಶಿಕ್ಷಣ ಮಂಡಲ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ (ರಿ), ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಶಿಕಾರಿಪುರ ಹಾಗೂ ರಾಷ್ಟ್ರೋತ್ಥಾನ ಬಳಗ, ಭಾರತೀಯ ಶಿಕ್ಷಣ ಮಂಡಲ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ “ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ” ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಯಾವ ವ್ಯಕ್ತಿ ನಿರ್ಭಯನಾಗಿರುತ್ತಾನೋ ಅವರು ಮಾತ್ರ ಶಿಕ್ಷಕರಾಗಲು ಮಾತ್ರ ಅರ್ಹರು. ವಿದ್ಯಾರ್ಥಿಯನ್ನು ನಿರ್ಭಯನನ್ನಾಗಿ ಮಾಡಿದಾಗ ಉತ್ತಮ ಸ್ವಸ್ಥ ಸಮಾಜ ಮತ್ತು ಸುಂದರ ಭಾರತವನ್ನು ಕಟ್ಟಲು ಸಾಧ್ಯ. ಶಿಕ್ಷಕನು ಕೇವಲ ಬೋಧನೆ ಮಾಡುವುದಕ್ಕೇ ಮಾತ್ರ ಸೀಮಿತವಾದಾಗ ರಾಷ್ಟ್ರನಿರ್ಮಾಣವನ್ನು ಕಟ್ಟಲಾರ. ವಿದ್ಯಾರ್ಥಿಯನ್ನು ಶಿಸ್ತು, ಸಂಯಮ, ನಾಗರೀಕ, ಸಂಸ್ಕಾರಯಕ್ತನ್ನಾಗಿ ಮಾಡಿದಾಗ ಸಾಧ್ಯ ಎಂದರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ದೇಶದ ನಿಜವಾದ ಆತ್ಮ ಹಾಗಾದರೆ ಅಂತಹ ನಿರ್ಮಾತೃಗಳು ಅರ್ಜನೆಗಾಗಿ ಬಂದಿರುವುವರನ್ನು ಜ್ಞಾನ, ವಿಜ್ಞಾನ, ಕೌಶಲ, ಸಂಸ್ಕಾರಗಳೆಂಬ ಸಂಗತಿಗಳಿಂದ ವಿಶೇಷ ಜ್ಞಾನವನ್ನು ಪಡೆಯುವಂತೆ ಮಾಡುವವರೆ ನಿಜವಾದ ಶಿಕ್ಷಕ. ಆದ್ದರಿಂದ ದೇಶದ ಗುಣಮಟ್ಟವನ್ನು ಅಳಿಯಬೇಕಾದರೆ ಶಿಕ್ಷಣದ ಗುಣಮಟ್ಟ ಅಳೆಯಬೇಕಾಗುತ್ತದೆ. ಶಿಕ್ಷಣದ ಗುಣಮಟ್ಟ ನಿರ್ಧರಿಸುವುದು ಆ ದೇಶದ ಶಿಕ್ಷಕರಿಂದ ಮಾತ್ರ. ಶಿಕ್ಷಕ ಎಂದಬುದಕ್ಕೆ ಸಂವಾದಿಯಾಗಿ ಭಾರತದಲ್ಲಿ “ಗುರು” ಎಂದು ಕರೆದುಕೊಂಡಿದ್ದೇವೆ. ಇದಕ್ಕೆ ಪರ್ಯಾಯವಾಗಿ ಇಂದಿಗೂ ಯಾರನ್ನು ತುಂಬಲು ಸಾಧ್ಯವಾಗುತ್ತಿಲ್ಲ ಎಂದರು.
Also read>> ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ಗಳಿಂದ ಭಾರತದ ಸರಕು ಸಾಗಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ
ಕೇವಲ ಬೋಧಿಸುವ ಶಿಕ್ಷಕರಾದರೆ ಸಾಲದು, ಕಲಿಸುವ ಮತ್ತು ಕಲಿಯುವ ಶಿಕ್ಷಕರಾಗಬೇಕು. ಕೇವಲ ನೌಕರಿಯ ಶಿಕ್ಷಕರಾಗದೇ, ಕಲಿಯುವ ಹಂಬಲವುಳ್ಳ ಗುರುವಾಗಬೇಕು.ಶಿಕ್ಷಕ ತಾಯಿಯಂತೆ ಪ್ರೀತಿಯನ್ನು, ತಂದೆಯಂತೆ ಶಿಸ್ತನ್ನು ಕಲಿಸಲು ಸಾಧ್ಯವಾದಾಗ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬ ಶಿಕ್ಷಕ ಅವಸ್ಥೆಯನ್ನು ಬದಲಾಯಿಸಿದಾಗ ವ್ಯವಸ್ಥೆಯನ್ನು ಬದಲಾಯಿಸಲಾದಾಗ ಮಾತ್ರ ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಬಹುದು ಅದರ ಮೂಲಕ ಸ್ವಾಸ್ಥ್ಯ ದೇಶವನ್ನು ನಿರ್ಮಾಣ ಮಾಡುವುದಕ್ಕೆ ಕಾರಣವಾಗುತ್ತದೆ. ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ ಶಿವಕುಮಾರ್ ಮಾತನಾಡಿ, ಶಿಕ್ಷಕರೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಾಣ ಮಾಡುವವರು ಅವರ ಜೀವನವನ್ನು ರೂಪಿಸುವ ಶಿಲ್ಪಿಗಳಾಗಬೇಕು. ಅರ್ಥಪೂರ್ಣ ಕಲಿಕೆಯ ಬಗೆಗೆ ಬದ್ಧತೆಯನ್ನು ಹೊಂದುವುದು ಅತ್ಯಂತ ಅವಶ್ಯಕ. ಶಿಕ್ಷಕರೆಂದರೆ ನುಡಿದಂತೆ ನಡೆಯುವಂತಾಗಬೇಕು. ನಡೆಯೇ ನುಡಿಗಳಾಗಬೇಕು. ಇಂದಿನ ಜಗತ್ತಿನಲ್ಲಿ ಎ ಐಗೆ ಮೊರೆಹೋಗುತ್ತಿರುವ ಸಂದರ್ಭದಲಿ ಯುವಕರನ್ನು ಭವಿಷ್ಯಕ್ಕಾಗಿ ತಯಾರು ಮಾಡಬೇಕಾದ ಅನಿವಾರ್ಯತೆಯಿದೆ. ಭಾರತದಂತಹ ಭವ್ಯ ದೇಶಕ್ಕೆ ಉತ್ತಮ ಸಂಸ್ಕಾರ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಕರಾದಾಗ ಮಾತ್ರ ಉತ್ತಮ ಸಮಾಜ ಮತ್ತು ದೇಶವನ್ನು ಕಟ್ಟೋಣ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿವಕುಮಾರ ಎಂ.ಬಿ, ಅಧ್ಯಕ್ಷರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಶ್ರೀ ಕುಬೇರಪ್ಪ ಕೆ ಆಢಳಿತ ಸಮನ್ವಯಾಧಿಕಾರಿಗಳು, ಪ್ರೋ ಅಜಯ್ ಕುಮಾರ, ಐ ಐ ಟಿ ಪ್ರೋಪೇಸರ್, ಜಿತೇಂದ್ರ ನಾಯಕ್, ರಾಜ್ಯ ಕಾರ್ಯದರ್ಶಿಗಳು, ಕರ್ನಾಟಕ ಉತ್ತರ, ಗಜಾನನ, ಕೇಂದ್ರ ಕಾರ್ಯಾಲಯ ಪ್ರಮುಖರು, ಅಭಿಷೇಕ್ ಸಂಚಾಲಕರು ಶಿವಮೊಗ್ಗ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಮತ್ತು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಬೋಧಕ ಮತ್ತು ಬೋಧಕೇತರ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವು ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ರೂಪಾ ಎಸ್ ಜಿ & ತಂಡ ಪ್ರಶಿಕ್ಷಣಾರ್ಥಿ, ಸ್ವಾಗತವನ್ನು ಪ್ರೇಮಾ ಸಿ ಪಾಟೀಲ್, ಪ್ರಶಿಕ್ಷಣಾರ್ಥಿ ನೆರವೇರಿಸಿದರೆ, ವಂದನೆಯನ್ನು ರಂಜಿತಾ ಪ್ರಶಿಕ್ಷರ್ಣಾರ್ಥಿ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ರಕ್ಷಿತಾ ಜಿ ಎನ್, ಪ್ರಶಿಕ್ಷಣಾರ್ಥಿ ನೆರವೇರಿಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








