ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಪತ್ತೆಯಾಗದೇ ಗ್ರೀನ್ ಝೋನ್’ನಲ್ಲಿರುವ ಜಿಲ್ಲೆಯ ಮತ್ತಷ್ಟು ಸುರಕ್ಷತೆಗಾಗಿ ಇನ್ನಷ್ಟು ಸ್ಟ್ರಾಂಗ್ ಚೆಕ್’ಪೋಸ್ಟ್’ಗಳನ್ನು ನಿರ್ಮಿಸುವಂತೆ ಯುವ ಕಾಂಗ್ರೆಸ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳಿದ್ದು, ಅದರಂತೆ ಪಕ್ಕದ ದಾವಣಗೆರೆ ಜಿಲ್ಲೆಯು ರೆಡ್ ಜೋನ್‌ನಲ್ಲಿದೆ. ನಮ್ಮ ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿರುವ ಗ್ರಾಮಗಳ ಮುಖಾಂತರ ರೆಡ್ ಜೋನ್ ಜಿಲ್ಲೆಯಿಂದ ಸಾರ್ವಜನಿಕರು ಉಪ-ರಸ್ತೆಗಳಲ್ಲಿ ಚೆಕ್ ಪೋಸ್ಟ್ ಇಲ್ಲದ ಕಾರಣ ನಮ್ಮ ಜಿಲ್ಲೆಗೆ ಬರುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದಿದ್ದಾರೆ.
ಈಗಾಗಲೇ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಮುಖ್ಯ ರಸ್ತೆಗಳಲ್ಲಿ ಚೆಕ್‌ಪೋಸ್ಟ್’ಗಳನ್ನು ನಿರ್ಮಿಸಿದ್ದು, ಮಡಿಕೆಚೀಲೂರು, ಸುತ್ತುಕೋಟೆ, ಕುಂಸಿ, ಚೋರಡಿ ಚೆಕ್‌ಪೋ’ಸ್ಟ್‌ಗಳ ಮೂಲಕ ಕೆಲವೊಂದು ಕಾರಣಗಳನ್ನು ಹೇಳಿ ಆನ್‌ಲೈನ್ ಮೂಲಕ ಪಾಸ್‌ಗಳನ್ನು ಪಡೆದು ಬರುತ್ತಿದ್ದು, ಆದರೆ ಕೆಲವೊಂದು ಗ್ರಾಮಗಳ ಉಪರಸ್ತೆಗಳ ಮೂಲಕ ಜನ ಯಾವುದೇ ಮುಂಜಾಗ್ರತೆ, ಪಾಸ್‌ಗಳು ಇಲ್ಲದೇ ಶಿವಮೊಗ್ಗ ಜಿಲ್ಲೆಗೆ ರೆಡ್ ಜೋನ್‌ಗಳಿಂದ ಜನ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಗ್ರೀನ್ ಜೋನ್ ಇರುವ ಕಾರಣ ಲಾಕ್‌ಡೌನ್ ಸ್ವಲ್ಪ ಸಡಿಲಿಕೆಯಿಂದ ಜಿಲ್ಲೆಯ ಜನರ ಜನಜೀವನ ಸ್ಥಿತಿ ಸಹಜಸ್ಥಿತಿಗೆ ಮರಳುತ್ತಿದ್ದು, ಆದರೆ ಪಕ್ಕದ ಜಿಲ್ಲೆಗಳ ಪಾಸಿಟಿವ್ ಪ್ರಕರಣಗಳಿಂದ ಶಿವಮೊಗ್ಗ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ಎಲ್ಲಾ ಚೆಕ್’ಪೋಸ್ಟ್‌ಗಳನ್ನು ಹಾಗೂ ಉಪರಸ್ತೆಗಳಲ್ಲಿ ಸ್ಟ್ರಾಂಗ್ ಚೆಕ್’ಪೋಸ್ಟ್ ನಿರ್ಮಿಸಬೇಕು. ಇಲ್ಲಾವಾದರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಂದ ಶಿವಮೊಗ್ಗ ಜಿಲ್ಲೆಗೆ ಪಾಸಿಟಿವ್ ಪ್ರಕರಣಗಳು ಬಂದರೆ ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರವೀಣ್ ಕುಮಾರ್ ನಗರ ಅಧ್ಯಕ್ಷ ಎಚ್.ಪಿ. ಗಿರೀಶ್ ರಾಜ್ಯ ಕಾರ್ಯದರ್ಶಿ ಟಿ.ವಿ. ರಂಜಿತ್ ಗ್ರಾಮಾಂತರ ಅಧ್ಯಕ್ಷ ಇ.ಟಿ. ನಿತಿನ್ ರಾವ್ ನಗರ ಉಪಾಧ್ಯಕ್ಷ ಕುಮರೇಶ್ ಪದಾಧಿಕಾರಿಗಳಾದ ಸಿದ್ದೇಶ್, ಗಣೇಶ್, ಚಂದನ್, ನಂದನ್, ಸತೀಶ್ ಶ್ರೀನಿವಾಸ್ ಇತರರು ಇದ್ದರು.
Get in Touch With Us info@kalpa.news Whatsapp: 9481252093
Discussion about this post