ಕಲ್ಪ ಮೀಡಿಯಾ ಹೌಸ್ | ಬುಲಂದ್ಶಹನರ್ |
ಅಪ್ರಾಪ್ತ ಹಿಂದೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಬಲವಂತವಾಗಿ ಮತಾಂತರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನೀಶ್ ಅಹ್ಮದ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಪ್ರಕರಣ ಉತ್ತರ ಪ್ರದೇಶದ ಬುಲಂದ್ಶಹನರ್’ನಲ್ಲಿ ನಡೆದಿದೆ.
ಈ ಕುರಿತಂತೆ ಅಲ್ಲಿನ ಎಸ್ಸಿ, ಎಸ್ಟಿ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿ ವಿರುದ್ಧ ಹಿಂದೂ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಬಲವಂತವಾಗಿ ಮತಾಂತರ ಮಾಡಿದ ಆರೋಪ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅನೀಶ್’ಗೆ ಜೀವಾವಧಿ ಶಿಕ್ಷೆ ಹಾಗೂ 4.45 ಲಕ್ಷ ರೂ. ದಂಡವನ್ನು ವಿಧಿಸಿದೆ.
Also read: ಮೈಸೂರು-ತಾಳಗುಪ್ಪ ರೈಲಿಗೆ ತಲೆಕೊಟ್ಟು ಸಾಗರದ ವಿದ್ಯಾರ್ಥಿನಿ ಆತ್ಮಹತ್ಯೆ
ಈ ಘಟನೆಯು ಮಾರ್ಚ್ 2022 ರ ಹಿಂದಿನದ್ದಾಗಿದೆ. ಪರಿಶಿಷ್ಟ ಜಾತಿಯ ಹುಡುಗಿಯೊಬ್ಬಳು ಅನೀಶ್ ಅಹ್ಮದ್ ಎಂಬಾತ ಆಕಾಶ್ ಎಂಬ ಹಿಂದೂ ಎಂದು ಸುಳ್ಳು ಹೇಳಿ ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಆನಂತರ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿದ್ದನು. ಆದರೆ ಈ ವಿಚಾರ ಹೊರಬಂದ ನಂತರ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಪ್ರಕರಣ ದಾಖಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post